ಪೋರ್ಟ್ ಲೂಯಿಸ್(ಮಾರಿಷಸ್): ದ್ವೀಪರಾಷ್ಟ್ರ ಮಾರಿಷಸ್ ನಲ್ಲಿ ನೆಲೆಸಿರುವ ಕನ್ನಡಿಗರ ನೇತೃತ್ವದ “ಮಲ್ಲಿಗೆ ಕನ್ನಡ ಬಳಗ” ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿದೆ.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ಅನುಸರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹುಮ್ಮಸ್ಸಿನಿಂದ ನಡೆದಿತ್ತು.
ಜೆಎಸ್ಎಸ್ ಪ್ರಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿದ್ದು, ಕನ್ನಡ ಧ್ವಜ ಹಾರಿಸಿ ನಾಡಗೀತೆಯೊಂದಿಗೆ ಕನ್ನಡ ಹಬ್ಬ ಆಚರಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.ಮಲ್ಲಿಗೆ ಕನ್ಡಡ ಬಳದ ಪುಟಾಣಿ ಗಳಿಂದ ನೃತ್ಯ ನಡೆಯಿತು. ಹಿರಿಯರಿಂದ ಒನಕೆ ಓಬವ್ವ ಕಿರುನಾಟಕ ಪ್ರದರ್ಶನಗೊಂಡಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ನೃತ್ಯ, ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಿದ್ದು, ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.