ಬೆಂಗಳೂರು: ಇನ್ಫೋಸಿಸ್ ಬೆಂಗಳೂರು ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ 11 ಆವೃತ್ತಿಯ ಕನ್ನಡ ರಾಜ್ಯೋತ್ಸವ ಒಂದು ವಾರಗಳ ಕಾಲ ಸಂಭ್ರಮದಿಂದ ನಡೆಯಿತು.
ಸಿರಿಗಂಧ ತಂಡದ ಸ್ವಯಂ ಸೇವಕರ ಮುಂದಾಳತ್ವದಲ್ಲಿ ವಾರ ಪೂರ್ತಿ ಕರ್ನಾಟಕದ ಕುರಿತ ರಸಪ್ರಶ್ನೆ, ಅಂತ್ಯಾಕ್ಷರಿ, ಕರ್ನಾಟಕ ಪರಿಚಯ ವಸ್ತುಪ್ರದರ್ಶನ, ಕ್ಲಿಕ್ ಕರ್ನಾಟಕ ಛಾಯಾಗ್ರಹಣ, ತ್ಯಾಜ್ಯದಿಂದ ಕಲೆ ಸ್ಪರ್ಧೆ, ರಾಜ್ಯೋತ್ಸವ ಓಟ ಹಾಗೂ ಕರ್ನಾಟಕ ಆಹಾರ ಮೇಳ ಸಹಿತವಾಗಿ ವಿವಿಧ ತಂಡ ರಚನಾ ಚಟುವಟಿಕೆಗಳು ಮತ್ತು ಸ್ಪರ್ಧೆಗಳು, ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ತೆರೆಕಂಡಿದೆ.
ಡಾ. ರಾಜ್‌ಕುಮಾರ್ ಅವರು ಹಾಡಿರುವ ಹಲವು ಹಾಡುಗಳನ್ನು 80 ಇನ್ಫೋಸಿಸ್ ಸಿಬ್ಬಂದಿ ಹಾಡಿದರು. ಹಿನ್ನೆಲೆ ಗಾಯಕಿ ಅನನ್ಯ ಭಟ್ ಗಾಯನ ಹಾಗೂ ಬ್ಯಾಂಡ್‌ನ ವಾದ್ಯಗೋಷ್ಠಿ ನಡೆಯಿತು. ಗಜಾನನ ಯುವಕ ಮಂಡಳಿ ಸದಸ್ಯರು ಗ್ರಾಮಸ್ಥರ ಸಹಯೋಗದೊಂದಿಗೆ ವಾಲಿ ವಧೆ ನಾಟಕ ಪ್ರದರ್ಶಿಸಿದರು.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಹಾಗೂ ನಯನಾ ಅವರಿಂದ ಹಾಸ್ಯ ಸಂಜೆ, ಇನ್ಫೋಸಿಸ್ ಕ್ಯಾಂಪಸ್‌ನ ಕಲಾ ತಂಡದಿಂದ ನೃತ್ಯ ಹಾಗೂ ನಾಟಕ ನೆರವೇರಿತು. ಸಿರಿಗಂಧ ತಂಡದ ಸ್ವಯಂ ಸೇವಕರು ಅನುಪಯುಕ್ತ ವಸ್ತುಗಳನ್ನು ಬಳಸಿ ನಿರ್ಮಿಸಿದ್ದ 28 ಅಡಿ ಎತ್ತರದ ಕನ್ನಡತೇರು ಪ್ರಮುಖ ಆಕರ್ಷಣೆಯಾಗಿತ್ತು.
ರಾಜ್ಯೊತ್ಸವ ಪುರಸ್ಕಾರ: ಎರಡು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರ್ದೇಶಕ, ಚಿತ್ರ ಸಾಹಿತಿ ಯೋಗರಾಜ್ ಭಟ್ ಹಾಗೂ ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿ ಪಾಲ್ಗೊಂಡಿದ್ದರು. ರಾಕೆಟ್ ವುಮೆನ್ ಖ್ಯಾತಿಯ ಬಿ.ಪಿ.ದಾûಾಯಿಣಿಯವರು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಸಾಧನೆಗಾಗಿ ಸಿರಿಗಂಧ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.