Advertisement
ರಾಜ್ಯೋತ್ಸವವನ್ನು ನ. 1ರಂದು ಆಚರಿಸಿದರೆ ಮಾತ್ರ ಒಂದು ವಿಶೇಷ ಸೊಬಗು ಬರುತ್ತದೆ. ಮುಂದೆ ಭಾರತದ ಸ್ವಾತಂತ್ರ್ಯ ದಿನಾಚರಣೆ, ಕೆನಡಾ ದಿನದ ಆಚರಣೆಗಳನ್ನು ಸಹ ನಡೆಸುವಂತಹ ಒಂದು ಸತ್‌ಸಂಪ್ರದಾಯ ಇಂದು ಮತ್ತು ಮುಂದೆಯೂ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
Related Articles
Advertisement
ವಿನಾಯಕ ಹೆಗಡೆ, ಶಶಿ ಗೌರಕ್ಕಲ್, ಪವನ್ ರಾವ್, ನಮ್ರದಾ ಪ್ರಸಾದ್ ಮತ್ತು ಕುಮಾರಿ ನಿಧಿ ಸುಬ್ರಹ್ಮಣ್ಯ ಅವರು ಡಾ| ದೊಡ್ಡರಂಗೇಗೌಡ ಅವರ ಕನ್ನಡ ಹಾಡುಗಳನ್ನು ಹಾಡಿ ಅವರಿಗೆ ಗೌರವ ಸೂಚಿಸಿದರು.
ಬಳಿಕ ಸುಬ್ರಹ್ಮಣ್ಯ ಶಿಶಿಲ ಅವರು ಡಾ| ದೊಡ್ಡರಂಗೇಗೌಡ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾಜಶೇಖರ ಬೀಚನಹಳ್ಳಿ ವಂದಿಸಿದರು. ಚೇತನ್ ಭಾರದ್ವಾಜ್, ತೇಜಸ್ ಐವಳ್ಳಿ ಮತ್ತು ನಿವೇದಿತಾ ಪುರಾಣಿಕ್ ಅವರು ತಾಂತ್ರಿಕವಾಗಿ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಯುವ ಸಮಿತಿಯ ವಿದ್ಯಾರ್ಥಿಗಳು ಕೆನಡಾದ ದೇಶಭಕ್ತಿ ಗೀತೆ “ಓ ಕೆನಡಾ’ ಮತ್ತು ಭಾರತದ “ಜನಗಣಮನ’ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದ ಅನಂತರವೂ ಕನ್ನಡ ಧ್ವಜ ಆಗಸದೆತ್ತರದಲ್ಲಿ ಹಾರುತ್ತಿತ್ತು.
ಕನ್ನಡ ಇಂದು ವಿಶ್ವಮುಖೀಯಾಗಿದೆ: ಡಾ| ದೊಡ್ಡರಂಗೇಗೌಡನಾವು ಎಲ್ಲಿದ್ದರೇನು? ಎಂತಿದ್ದರೇನು? ಕನ್ನಡ ನಮ್ಮ ಜೀವದ ಉಸಿರು. ಕನ್ನಡ ಸದಾಕಾಲ ನಮ್ಮಲಿ ಹಸಿರು. ಕನ್ನಡವೇ ಹೊಳೆ ಹೊಳೆಯುವ ಕದಿರು, ಇಂತಹ ಕನ್ನಡ ನಮಗೆ ಕಾಮಧೇನುವೂ ಹೌದು, ಕಲ್ಪವೃಕ್ಷವೂ ಹೌದು ಎಂದು ಕನ್ನಡ ನಾಡಿನ ಕುರಿತು, ಕನ್ನಡ ಅಭಿಮಾನದ ಕುರಿತು ಹಿರಿಯ ಕವಿ, ಸಾಹಿತಿ, ಡಾ| ದೊಡ್ಡರಂಗೇಗೌಡ ಅವರು ವ್ಯಾಖ್ಯಾನಿಸಿದರು. ಟೊರೊಂಟೊ ಕನ್ನಡ ಸಂಘದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಮಣ್ಣಿನಲ್ಲಿ ಹುಟ್ಟಿದ ನಾನು ಮತ್ತು ನೀವು ಎಲ್ಲೇ ಹೋಗಲಿ, ಕನ್ನಡದ ಸೊಲ್ಲನ್ನು ಆಡುತ್ತಾ, ಕನ್ನಡದ ನಿಜವಾಗಿರತಕ್ಕಂತಹ ಸಾಹಿತ್ಯವನ್ನೇ ಹೀರುತ್ತಾ, ಕನ್ನಡದ ಸಂಸ್ಕೃತಿಯ ಸೌಗಂಧವನ್ನು ಮೈಗೂಡಿಸಿಕೊಳ್ಳುತ್ತಾ, ಕನ್ನಡತನವನ್ನ ನಾವು ಇರುವೆಡೆಯಲ್ಲೇ ಪ್ರದರ್ಶಿಸುತ್ತಾ, ಕನ್ನಡ ವ್ಯಕ್ತಿತ್ವದ ಮುದ್ರೆಯ ಛಾಪನ್ನು ಒತ್ತಬೇಕು ಎಂದರು. ಇಂದು ನನಗೆ ಆನಂದವಾಗಿದೆ. ಇವತ್ತು ಟೊರೊಂಟೊದ ಕನ್ನಡದ ಮಕ್ಕಳು ಕನ್ನಡವನ್ನು ಮರೆತಿಲ್ಲ. ಕನ್ನಡದ ಗೀತೆಗಳನ್ನು ಹಾಡಿದ್ದನ್ನು ಕೇಳಿದೆ. ನಿಜವಾಗಿಯೂ ಯಾವ ಕನ್ನಡಿಗರಿಗೂ ಇದು ಬಹಳ ಸಂತೋಷವನ್ನು ತಂದುಕೊಡುವಂತಹ ಸಂಗತಿ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕನ್ನಡಕ್ಕೆ ಭವ್ಯ ಇತಿಹಾಸವಿದೆ ಎಂದರೆ ನಾನು ಮತ್ತು ನೀವು ಹೆಮ್ಮೆ ಪಡಬೇಕು. ಈ ಬೃಹತ್ ಬೆಂಗಳೂರಿನ ಕೆಲ ಭಾಗದ ಕನ್ನಡಿಗರು ಅಭಿಮಾನ ಶೂನ್ಯರಾಗಿದ್ದಾರೆ. ಈ ವೇದಿಕೆಯ ಮುಖಾಂತರ ವಿಶ್ವದ ಎಲ್ಲ ಕನ್ನಡಿಗರಿಗೆ ನಾನು ಹೇಳಬಯಸುವುದೆಂದರೆ. ಕನ್ನಡ ನಮ್ಮ ತಾಯಿ, ಹೃದಯ, ಮನಸ್ಸು, ಬದುಕಿನ ಭಾಷೆ. ಇಂತಹ ಕನ್ನಡವನ್ನು ನಾವು ನಿತ್ಯವೂ, ಕ್ಷಣ ಕ್ಷಣವೂ ನಮ್ಮ ನಾಲಿಗೆಯಲ್ಲಿ ನರ್ತಿಸುವ ಹಾಗೆ ಮಾಡಬೇಕು. ಬರಿಯ ಮಾತನಾಡಿದರೆ ಸಾಲದು. ಕನ್ನಡದ ಸಂಸ್ಕೃತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಕನ್ನಡದ ವ್ಯಕ್ತಿತ್ವವನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಕನ್ನಡ ನಮ್ಮ ತಾಯಿ, ಹೃದಯ, ಮನಸ್ಸು, ಬದುಕಿನ ಭಾಷೆ. ಇಂತಹ ಕನ್ನಡವನ್ನು ನಾವು ನಿತ್ಯವೂ, ಕ್ಷಣ ಕ್ಷಣವೂ ನಮ್ಮ ನಾಲಿಗೆಯಲ್ಲಿ ನರ್ತಿಸುವ ಹಾಗೆ ಮಾಡಬೇಕು. ಬರಿಯ ಮಾತಾಡಿದರೆ ಸಾಲದು. ಕನ್ನಡದ ಸಂಸ್ಕೃತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು.
-ಡಾ| ದೊಡ್ಡರಂಗೇಗೌಡ, ಸಾಹಿತಿ