Advertisement

ಅನ್ಯ ಭಾಷೆಯಿಂದ ಕನ್ನಡಕ್ಕೆ ಕುತ್ತು

04:06 PM Nov 29, 2020 | Suhan S |

ಮಂಡ್ಯ: ಪ್ರಸ್ತುತ ವಿಜ್ಞಾನದಲ್ಲಿ ಹೆಚ್ಚು ಅನ್ಯ ಭಾಷೆಯು ಬಳಕೆಯಾಗುತ್ತಿರುವುದರಿಂದ ಕನ್ನಡ ಭಾಷೆಗೆ ಪೆಟ್ಟುಬೀಳುತ್ತಿದೆ ಎಂದು ನಿವೃತ್ತಕನ್ನಡ ಪ್ರಾಧ್ಯಾಪಕ ಡಾ.ಬೋರೇಗೌಡ ಚಿಕ್ಕ ಮರಳಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೆ ನಾಡು- ನುಡಿಯಉಳಿವಿಗೆಹೋರಾಟ ನಡೆಯುತ್ತಿದೆ. ವಿಜ್ಞಾನದಲ್ಲಿ ಬಳಕೆಯಾಗುವ ಪುಸ್ತಕಗಳು ಕನ್ನಡಕ್ಕೆ ಅನುವಾದ ಮಾಡುವ ಪ್ರಯತ್ನಗಳೂ ನಡೆಯುತ್ತಿಲ್ಲ ಎಂದರು.

ವಿವಿಗಳಲ್ಲಿ ಕನ್ನಡ ಕೆಲಸ ಆಗುತ್ತಿಲ್ಲ: ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ ಉಳಿಸುವ ಕೆಲಸ ವಾಗುತ್ತಿಲ್ಲ. ಉದಯವಾಗಲಿ ಚಲುವ ಕನ್ನಡನಾಡು, ಹಚ್ಚೇವುಕನ್ನಡದ ದೀಪ ಎಂಬ ಅನೇಕ ಸಾರಾಂಶಗಳನ್ನು ನಮ್ಮ ಕವಿಗಳು ಬರೆದುಕೊಟ್ಟಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಉಳಿಸುವ ಕೆಲಸ ಏಕೆ ಆಗುತ್ತಿಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಹಿಂದೆ ಮಾಡುತ್ತಿದ್ದ ಕೆಲಸಗಳು ಈಗ ಮಾಡುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ನುಡಿಗಟ್ಟಿನ ಅವಶ್ಯಕತೆ: ಭಾಷೆಯ ಬೆಳವಣಿಗೆಗೆ ನುಡಿಗಟ್ಟಿನ ಅವಶ್ಯಕತೆ ಇರುತ್ತದೆ. ನುಡಿಗಟ್ಟಿನಲ್ಲಿ ಸಾಂಸ್ಕೃತಿಕ ಪರಂಪರೆ ಇರುತ್ತದೆ. ಆದ್ದರಿಂದ ಪದಗಳ ಬಳಕೆ ಭಾಷೆಯ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗುತ್ತದೆ. ಯಾವ ಭಾಷೆಗೆ ಸತ್ವವಿರುತ್ತದೋ ಅಲ್ಲಿ ಆಚರಣೆಗಳ ಅಗತ್ಯವಿರುವುದಿಲ್ಲ. ಎಲ್ಲಿ ಬಳಕೆ ಹಾಗೂ ಬಳಸುವಿಕೆ ಇರುವುದಿಲ್ಲವೋ ಅಲ್ಲಿ ಭಾಷೆ ಬೆಳ ವಣಿಗೆ ಸಾಧ್ಯವಾಗುವುದಿಲ್ಲ ಎಂದರು.

ಆಡಳಿತ ಭಾಷೆ ಕನ್ನಡವಾಗಬೇಕು: ಪ್ರಾಂಶುಪಾಲ ಕೆ.ಬಿ.ನಾರಾಯಣ ಮಾತನಾಡಿ, ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡದ ಹೊರತು ನಮ್ಮ ಭಾಷೆ ಬೆಳವಣಿಗೆ ಸಾಧ್ಯ ವಾಗದು. ಕೂಡಲೇ ಆಡಳಿತ ಭಾಷೆ ಕನ್ನಡ ಎಂದು ಘೋಷಣೆ ಮಾಡಲು ಸರ್ಕಾರ ಮುಂದಾಗಬೇಕು. ಆಗ ಮಾತ್ರ ಕನ್ನಡ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.

Advertisement

ಪದ ಪರಿಚಯಿಸುವಿಕೆ ಹೆಚ್ಚಾಗಬೇಕು: ನಮ್ಮ ಭಾಷೆಯ ಉಳಿವಿಗಾಗಿ ವಿದ್ಯಾರ್ಥಿ ಹಂತದಿಂದಲೇ ಕೆಲಸ ಮಾಡಬೇಕು. ಪದಗಳ ಬಳಕೆ ಮತ್ತು ಅರ್ಥ ಬಹಳ ಮುಖ್ಯವಾಗಿರುತ್ತದೆ. ಪದಗಳನ್ನು ಪರಿಚಯಿಸುವ ಪುಸ್ತಕಗಳು ಹೆಚ್ಚು ಬರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳುಸಾಗಬೇಕಿದೆ ಎಂದು ಹೇಳಿದರು.

ನೆಲದ ಸಿರಿ ಸಂಚಿಕೆ ಬಿಡುಗಡೆ: ಕನ್ನಡ ‌ ಭಾಷೆಗೆ ಸಂಬಂಧಿಸಿದಂತೆ ನಮ್ಮ ಕಾಲೇಜಿನಲ್ಲಿ ನೆಲದ ಸಿರಿ ಎಂಬ ಸಂಚಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ.ಈಸಂಚಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವ ಹಾಗೂ ಕನ್ನಡಾಭಿಮಾನದ ಬಗ್ಗೆ ಕೃತಿಗಳನ್ನು ಬರೆದು ಕೊಡುವ ಕೆಲಸವಾಗುತ್ತದೆ. ಅದೇ ರೀತಿ ವಿವಿಧ ವಿಭಾಗದ ವಿದ್ಯಾರ್ಥಿಗಳಿಗೂ ಒಂದೊಂದು ಸಂಚಿಕೆಗೆ ಅನುವು ಮಾಡಿಕೊಡಲಾಗಿದೆ. ಮಧ್ಯಮಗಳು ಕನ್ನಡ ಭಾಷೆಯ ಬಳಕೆ ಮಾಡುತ್ತಿವೆ. ಆದರೆ, ಕೃತಿಯ ರೂಪದಲ್ಲಿ ಕಾಣಿಸುತ್ತಿಲ್ಲ. ಸಾಹಿತ್ಯ ರಚನೆಯ ಬಗ್ಗೆ ವಿದ್ಯಾರ್ಥಿಗಳು ಕಾಳಜಿ ವಹಿಸುತ್ತಿಲ್ಲ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮದನ ಕುಮಾರ್‌ ಮತ್ತು ಪ್ರಾಧ್ಯಾಪಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next