Advertisement

ಕನ್ನಡ- ನೇಪಾಳಿ ಕವಿತೆ ಭಾಷಾಂತರ ಒಪ್ಪಂದ

12:02 PM May 06, 2017 | |

ಬೆಂಗಳೂರು: ಕನ್ನಡದ 50 ಕವಿಗಳ 50 ಕವನಗಳನ್ನು ನೇಪಾಳಿ ಭಾಷೆಗೆ ಭಾಷಾಂತರಗೊಳಿಸುವ ಒಪ್ಪಂದವೊಂದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನೇಪಾಳಿ ಕಲಾ  ಡಾಟ್‌ ಕಾಂ ಪ್ರತಿಷ್ಠಾನ ಗುರುವಾರ ಸಹಿ ಹಾಕಿವೆ. 

Advertisement

ನೇಪಾಳಿಯಲ್ಲಿನ 50 ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸುವುದು ಹಾಗೆಯೇ ಕನ್ನಡದ 50 ಕವಿಗಳ 50 ಕವನಗಳನ್ನು ನೇಪಾಳಿ ಣಭಾಷೆಗೆ ಅನುವಾದಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶ. ಜತೆಗೆ ಪರಸ್ಪರ ದೇಶ, ರಾಜ್ಯಗಳ ಬರಹಗಾರರ ಸಾಹಿತ್ಯಗಳನ್ನು ಭಾಷಾಂತರಿಸಿ ಪ್ರಕಟಿಸಲು ಉಭಯತ್ರಯರು ಒಪ್ಪಿಗೆ ಸೂಚಿಸಿ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. 

ಭಾಷಾ ಬೆಳವಣಿಗೆಗೆ ಹಾಗೂ ಸಾಹಿತ್ಯ, ಸಂಸ್ಕೃತಿಯನ್ನು ವಿದೇಶಗಳಲ್ಲೂ ಪ್ರಚಾರ ಮಾಡುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಪ್ರಪ್ರಥಮವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದಕ್ಕೆ ಸಹಿ ಮಾಡಿದೆ ಎಂದು ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ ಈ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next