ಜತೆಗೆ ಅತ್ಯುತ್ತಮ ಪೋಸ್ಟರ್ ವಿಭಾಗದಲ್ಲಿಯೂ “ರುದ್ರಿ’ ಪ್ರಶಸ್ತಿ ಪಡೆದುಕೊಂಡಿತ್ತು. ಈಗ ಅಂಥದ್ದೇ ಮತ್ತೂಂದು ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಈಮೂರು ಪ್ರಶಸ್ತಿಗಳು
“ರುದ್ರಿ’ಯ ಮುಡಿಗೇರಿದೆ.
Advertisement
ಹೌದು, ಇತ್ತೀಚೆಗೆ ನಡೆದ ಟ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ “ರುದ್ರಿ’ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನಟಿ ಪಾವನಾ ಅತ್ಯುತ್ತಮ ನಟಿ ಪ್ರಶಸ್ತಿ ಗೌರವ ಪಡೆದುಕೊಂಡಿದ್ದರೆ, ಬಡಿಗೇರ್ ದೇವೇಂದ್ರ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶನ ಹಾಗೂ ಅತ್ಯುತ್ತಮ ನರೇಟಿವ್ ಫಿಚರ್ ವಿಭಾಗದಲ್ಲಿ ಪ್ರಶಸ್ತಿಗಳು ಬಂದಿವೆ. ಈ ಬಗ್ಗೆ ಮಾತನಾಡಿರುವ ಚಿತ್ರತಂಡ, ಟ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತನ್ನದೇಯಾದ ಪರಂಪರೆ ಮತ್ತು ಮಹತ್ವವಿದೆ. ಇಲ್ಲಿ ಚಿತ್ರಗಳು ಭಾಗವಹಿಸುವುದೇ ಒಂದು ಹೆಮ್ಮೆಯ ವಿಷಯ. ಇಲ್ಲಿ ಪ್ರದರ್ಶನವಾಗುವ ಚಿತ್ರಗಳನ್ನು ದೇಶದ ಸಿನಿಮಾರಂಗದ ಅನೇಕ ಮಹಾನ್ ದಿಗ್ಗಜರು ವೀಕ್ಷಿಸುತ್ತಾರೆ. ಇಂಥ ಕಡೆ ನಮ್ಮ ಸಿನಿಮಾ ಪ್ರದರ್ಶನವಾಗಿದೆ’ ಎಂದು ಹೇಳಿಕೊಂಡಿದೆ.
“ರುದ್ರಿ’ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇನ್ನೂ ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಭಾಗ್ಯ ಸಿಕ್ಕಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ದರೆ,
ಇದೇ ಏಪ್ರಿಲ್ ತಿಂಗಳಿನಲ್ಲಿ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದಿದೆ.