Advertisement

ಕನ್ನಡ ಸಿನಿಮಾಗಳ ಯಶಸ್ಸಿಗೆ ಪೈರಸಿ ಮುಳ್ಳಾಗುತ್ತಿದೆಯೇ ? ನಿಮ್ಮ ಅಭಿಪ್ರಾಯವೇನು ?

04:04 PM Sep 21, 2019 | Mithun PG |

ಮಣಿಪಾಲ: ಸಿನಿಮಾ ಪೈರಸಿ ಎಂಬುದು ಇತ್ತೀಚಿಗಿನ ಅತೀ ಹೆಚ್ಚು ಚರ್ಚಿತ ವಿಷಯಗಳಲ್ಲಿ ಒಂದು. ಹೊಸದಾಗಿ ಬಿಡುಗಡೆಯಾದ ಸಿನಿಮಾಗಳನ್ನು ಚಿತ್ರಮಂದಿರದಿಂದಲೇ ವಿಡಿಯೋ ರೆಕಾರ್ಡ್ ಮಾಡಿ ವಿವಿಧ ಮೂಲಗಳ ಮೂಲಕ ಹರಿಯಬಿಡುವ ವ್ಯವಸ್ಥಿತ ಜಾಲವನ್ನು ಇಂದು ಕಾಣಬಹುದು.  ಈ ಹಿನ್ನಲೆಯನ್ನಿಟ್ಟುಕೊಂಡು ಉದಯವಾಣಿ ತನ್ನ ಓದುಗರಿಗೆ ಕನ್ನಡ ಸಿನಿಮಾಗಳ ಯಶಸ್ಸಿಗೆ ಪೈರಸಿ ಮುಳ್ಳಾಗುತ್ತಿದೆಯೇ ? ನಿಮ್ಮ ಅಭಿಪ್ರಾಯವೇನು ? ಎಂಬ ಪ್ರಶ್ನೆಯನ್ನು ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ .

Advertisement

ಕೀರ್ತನ ಮಿತ್ಯಾಂತ ಹಾಲಾಡಿ: ಇಂದು ಒಳ್ಳೆಯ ನಿರ್ದೇಶಕರು ಬರಬೇಕಾಗಿದೆ. ಸ್ಪಷ್ಟ ಕನ್ನಡ ಮಾತನಾಡುವ ನಟರು ಬೇಕು. ಡಾ.ರಾಜ್ ಕುಮಾರ್ , ಕೆ.ಎಸ್.ಅಶ್ವಥ್, ಚಿ.ಉದಯ ಶಂಕರ್, ಪುಟ್ಟಣ್ಣ, ಹಂಸಲೇಖ, ಡಾ.ವಿಷ್ಣುವರ್ಧನ್ , ಅನಂತ್ ನಾಗ್, ಶಂಕರ್ ನಾಗ್  ಮುಂತಾದವರ ಚಿತ್ರಗಳು ಯಶಸ್ಸನ್ನು ಕಾಣುತ್ತಿದ್ದವು . ಈಗೀನ ಸಿನಿಮಾಗಳು ಮೊದಲ ವಾರ ಮಾತ್ರ ಆಕರ್ಷಣೆ ಪಡೆದರುತ್ತದೆ. ಅದರಲ್ಲಿ ಯಾವ ಮೌಲ್ಯವೂ ಇರುವುದಿಲ್ಲ. ಕೇವಲ  ನಾಯಕ ನಟನನ್ನು ವೈಭವೀಕರಿಸುವ ಡೈಲಾಗ್ ಗಳು  ಮಾತ್ರ ಕಾಣುತ್ತೇವೆ. ಈ ವ್ವವಸ್ಥೆ ಮೊದಲು ಸರಿ ಹೋದರೆ ಪೈರಸಿ ಎಂಬುದು ತಪ್ಪುತ್ತದೆ.

ಗಂಗಾಧರ್ ಉಡುಪ:  ಉತ್ತಮ ಸಿನೆಮಾ ನೀಡಿದರೆ ಅದು ಎಂದೂ ಪೈರಸಿಗೆ ಒಳಗಾಗವುದಿಲ್ಲ.  ಮೊದಲು ಉತ್ತಮ ಚಿತ್ರಗಳು ಬರಲಿ.

ಮನು ಕೆ.ಬಿ: ಎಲ್ಲಾ ಚಿತ್ರರಂಗದಲ್ಲೂ ಈ ಪೈರಸಿ ಕಾಟ ಇದ್ದದ್ದೇ. ಚಿತ್ರದಲ್ಲಿರುವ ಕಂಟೆಂಟ್ ಮತ್ತು ಮೇಕಿಂಗ್ ಅತ್ಯುತ್ತಮವಾಗಿದ್ದಲ್ಲಿ ಯಾರೂ ಪೈರಸಿ ಸಿನಿಮಾ ನೋಡುವುದಿಲ್ಲ. ಉದಾಹರಣೆಗೆ: ಬಾಹುಬಲಿ – 2 ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಮಜವೇ ಬೇರೆ. ಕೆಜಿಎಫ್ ಸಿನಿಮಾದ ಮೇಕಿಂಗ್ ಚೆನ್ನಾಗಿತ್ತು ಹಾಗಾಗಿ ಜನ ಪೈರಸಿಯಲ್ಲಿ ಸಿನಿಮಾ ಸಿಕ್ಕರೂ ನೋಡುವುದಿಲ್ಲ.

ಮೊದಲಿಗೆ ಚಿತ್ರಮಂದಿರಗಳಲ್ಲಿ ಯಾರಾದರೂ ಪೈರಸಿ ಮಾಡುವುದು ಕಂಡುಬಂದರೆ ತಕ್ಷಣವೇ ಅದನ್ನು  ತಡೆಯಬೇಕು. ಇದು ಅಭಿಮಾನಿಗಳ ಕರ್ತವ್ಯ. ಅಂತೆಯೇ ಪೈರಸಿ ಇದೆ ಎಂದಾಗ ಅದನ್ನು ನೋಡುವ ಚಾಳಿಯನ್ನೂ ಮೊದಲು ಬಿಡಬೇಕಾಗಿದೆ.

Advertisement

ಶ್ಯಾಮ್ ಸಿಂಗನಮಲ್ಲಿ: ಖಂಡಿತ ಇಲ್ಲ. ಪೈರಸಿಯಿಂದ ಒಂದು ಚಲನಚಿತ್ರಕ್ಕೆ ಯಾವಾಗ ನಷ್ಟವಾಗುತ್ತೆ ಅಂದರೆ, ಪ್ರತಿಯೊಬ್ಬರೂ ಆ ಚಿತ್ರವನ್ನು ನೋಡಲೇಬೇಕೆಂದಾಗ ಮಾತ್ರ. ಆಕರ್ಷಣೆ, ಉತ್ತಮ ಕಥೆ, ನಿರೂಪಣೆ, ಉತ್ತಮ ತಾಂತ್ರಿಕತೆ, ಎಲ್ಲ ವಯೋಮಾನುಗಣಕ್ಕೆ ತಕ್ಕ ಮುಖ್ಯವಾಗಿ ಸಂದೇಶ ಎಲ್ಲ ಚಲನಚಿತ್ರಗಳಲ್ಲಿ ಇರುತ್ತದೆಯಾ?

ಪೈರಸಿ ಹಾವಳಿ ಇದ್ದಾಗಲೂ ಉತ್ತಮ ಚಿತ್ರಗಳು ಯಶಸ್ವಿಯಾಗಿವೆ. ಸಾಕಷ್ಟು ಹಣ ಗಳಿಕೆ ಮಾಡಿವೆ. ಉತ್ತಮ ದೃಶ್ಯ ಮಾಧ್ಯಮ, ಸಂಗೀತ, ಛಾಯಾಗ್ರಹಣ, ತಾಂತ್ರಿಕತೆ ಇರುವ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿದ ಖುಷಿ ದೂರದರ್ಶದಲ್ಲಿ ಬರುವದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next