Advertisement

ಶೀಘ್ರದಲ್ಲಿ ‘ಆಪರೇಶನ್ ಡಿ’ ಟ್ರೇಲರ್

04:41 PM May 22, 2023 | Team Udayavani |

ತಿರುಮಲೇಶ್‌.ವಿ ನಿರ್ದೇಶನದ ಕಾಮಿಡಿ ಕ್ರೈಂ ಥ್ರಿಲ್ಲರ್‌ ಕಥಾಹಂದರದ “ಆಪರೇಶನ್‌ ಡಿ’ ಚಿತ್ರದ ಟ್ರೇಲರ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ತಿರುಪತಿ, ಮಸ್ತಿ, ಬಣ್ಣ ಬಣ್ಣದ ಲೋಕ, ರಾಗಶೃಂಗ, ಟೇಕ್‌ ಇಟ್‌ ಈಸಿ ಸಿನಿಮಾಗಳಲ್ಲಿ ಅಭಿನಯಿಸಿದ್ದ ತಿರುಮಲೇಶ್‌ ವಿ ಈಗ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

Advertisement

“ಅದ್ವಿತ ಫಿಲಂ ಫ್ಯಾಕ್ಟರಿ’ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್‌ ಹಾಗೂ ರಂಗನಾಥ್‌. ಬಿ “ಆಪರೇಶನ್‌ ಡಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕ್ರೈಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜ ರವಿಶಂಕರ್‌, ತಿರುಮಲೇಶ್‌, ಸಿದ್ದರಾಜು, ಪ್ರಶಾಂತ್‌ ಸಂಭಾಷಣೆ ಬರೆದಿದ್ದಾರೆ. ವೇದಿಕ, ದ್ವೈಪಾಯನ ಹಾಗೂ ಸಂತೋಷ್‌ ನಾಲ್ಕು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಕೆಂಪಗಿರಿ ಹಾಗೂ ವೇದಿಕ ಸಾಹಿತ್ಯವಿದ್ದು, ಕಾರ್ತಿಕ್‌ ಪ್ರಸಾದ್‌ ಛಾಯಾಗ್ರಹಣ, ವಿಕ್ರಮ್‌ ಶ್ರೀಧರ್‌ ಸಂಕಲನ ಹಾಗೂ ತರ್ಮಾಕೋಲ್‌ ಶ್ರೀನಿವಾಸ್‌ ಕಲಾ ನಿರ್ದೇಶನ, ಸುರೇಶ್‌ .ಬಿ. ಕಾರ್ಯಕಾರಿ ನಿರ್ಮಾಣ, ಜಯ ಹರಿಪ್ರಸಾದ್‌ (ಜೆರ್ರಿ ಮಾಸ್ಟರ್‌) ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ವಿನೋದ್‌ ದೇವ್‌, ಸುಹಾಸ್‌ ಆತ್ರೇಯ, ರುದ್ರೇಶ್‌ ಬೂದನೂರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯರಾಗಿ ಸ್ನೇಹಾ ಭಟ್‌, ಇಂಚರಾ.ಬಿ.ಚನ್ನಪ್ಪ ನಟಿಸಿದ್ದಾರೆ.

ಶಿವಮಂಜು, ವೆಂಕಟಾಚಲ, ಜೂ ನರಸಿಂಹರಾಜು, ರಂಗನಾಥ ಬಿ, ಶ್ರೀಧರ್‌ ಟಿ ಎಸ್‌, ಸುರೇಶ್‌.ಬಿ, ಸಂಚಯ ನಾಗರಾಜ್‌, ಶಿವಾನಂದ, ಆಶಾ, ರೂಪಾ. ಆರ್‌, ಮಹೇಶ್‌ ಎಸ್‌.ಕಲಿ, ಕಿರಣ್‌, ಸಂತೋಷ್‌, ಖಾದರ್‌ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next