Advertisement

Mandya; ನವತಂಡದ ‘ಮಂಡ್ಯ’; 4 ಭಾಷೆಯಲ್ಲಿ ಬರುತ್ತಿದೆ ಸಿನಿಮಾ

07:02 PM Sep 05, 2024 | Team Udayavani |

“ಮಂಡ್ಯ’ ಹೀಗೊಂದು ಸಿನಿಮಾ ಸದ್ದಿಲ್ಲದೇ ಆರಂಭವಾಗಿದೆ. ಇದು ಹೊಸಬರ ಚಿತ್ರವಾದರೂ 4 ಭಾಷೆಗಳಲ್ಲಿ ತಯಾರಾಗುತ್ತಿದೆ. ತೆಲುಗಿನಲ್ಲಿ ಗಾಯಂ, ಹಿಂದಿಯಲ್ಲಿ ಬಾಂಬೆ, ಮರಾಠಿಯಲ್ಲಿ ಮವಾಲಿ ಎಂಬ ಟೈಟಲ್‌ ಇಡಲಾಗಿದೆ.

Advertisement

ಇದು ಮಂಡ್ಯ ನಗರದ ಕಥೆಯಾಗಿದೆ. ಸುಳ್ಳು, ದುರಾಸೆ ಮತ್ತು ಕಾಮ ಕಥೆಯನ್ನು ಈ ಚಿತ್ರ ಹೊಂದಿದೆ. ಭಾರತದ ವಿವಿಧ ಭಾಗಗಳಿಂದ ನಾಲ್ವರು ಹುಡುಗರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಮಂಡ್ಯಕ್ಕೆ ಬರುತ್ತಾರೆ. ತಮ್ಮ ಐಷಾರಾಮಿ ಜೀವನಕ್ಕಾಗಿ ಶ್ರೀಮಂತರನ್ನು ಸುಲಿಗೆ ಮಾಡಲು ಮುಂದಾಗುತ್ತಾರೆ. ಇದರಲ್ಲಿ ಒಬ್ಬ ಕಾಣೆಯಾದಾಗ ಚಿತ್ರ ಹೊಸ ತಿರುವು ಪಡೆಯುತ್ತದೆ ಎನ್ನುವುದು ತಂಡದ ಮಾತು.

ಈ ಚಿತ್ರವನ್ನು ಸಂಜಯ್‌ ನಿರ್ದೇಶನ ಮಾಡುತ್ತಿದ್ದಾರೆ. ಸನಮ್‌ ಪ್ರೊಡಕ್ಷನ್ಸ್‌ ಇಂಡಿಯಾ ನಿರ್ಮಾಣವಿದೆ. ಚಿತ್ರದಲ್ಲಿ ಗವಿ ಚಾಹಲ್, ದೀಪ್ಶಿಖಾ ನಾಗ್ಬಾಲ್, ಡ್ಯಾನಿಶ್‌ ಭಟ್‌, ಗಣೇಶ್‌ ಪೈ, ವಂದನಾ ಲಾಲ್ವಾನಿ, ಅಕ್ಷಿತಾ ಅಗ್ನಿಹೋತ್ರಿ, ಪರಿ ಮಿರ್ಜಾ, ಆಶಿಶ್‌ ವಾರಂಗ್‌, ಜಸ್ಸಿ ಸಿಂಗ್‌, ದೀಪಕ್‌ ಭಾಟಿಯಾ ಮತ್ತು ಪ್ರಕಾಶ್‌ ಧೋತ್ರೆ ಚಿತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next