Advertisement

ಅಂಗಡಿಗೆ ಡಾ.ರಾಜ್‌ ಹೆಸರಿಟ್ಟು ಪೂಜಿಸುವ ಕನ್ನಡ ಪ್ರೇಮಿ

04:50 PM Nov 03, 2019 | Suhan S |

ಶ್ರೀರಂಗಪಟ್ಟಣ: ಪಟ್ಟಣದ ಕಾವೇರಿ ಪುರದ ಬಡಾವಣೆಯಲ್ಲಿ ವಾಸ ಮಾಡುತ್ತಿರುವ ಅಪ್ಪಟ ಕನ್ನಡ ಪ್ರೇಮಿ ಜಬ್ಬರ್‌ ಖಾನ್‌. ಮುಸ್ಲಿಮನಾದರೂ ಆಡುವ ಭಾಷೆ ಮಾತ್ರ ಕನ್ನಡ. ಎಲೆಮರೆಕಾಯಿಯಂತೆ ಈತನ ಮನೆಯಲ್ಲಿರುವ ಕುಟುಂಬಸ್ಥರೆಲ್ಲರೂ ಕನ್ನಡ ಭಾಷೆಗೆ ಒತ್ತು ನೀಡಿದ್ದಾರೆ.

Advertisement

ಅಭಿಮಾನಿ: ಇವರು ನಟ ಸಾರ್ವಭೌಮ ಡಾ. ರಾಜಕುಮಾರ್‌ ಅಭಿಮಾನಿಯೂ ಹೌದು. ಡಾ. ರಾಜಕುಮಾರ್‌ ಅವರ ಬಿಡುಗಡೆಯಾದ ಎಲ್ಲಾ ಚಿತ್ರ ನೋಡಿದ್ದಾರೆ. ಅಲ್ಲದೇ, ಚಿತ್ರದ ಹೆಸರೇಳಿದರೆ ಯಾವ ವರ್ಷದಲ್ಲಿ ಬಿಡುಗಡೆಯಾಗಿದೆ ಎಂಬುದನ್ನು ತಿಳಿಸುತ್ತಾರೆ.

ಕನ್ನಡ ಭಾಷೆಗೆ ಒತ್ತು: ವೃತ್ತಿಯಲ್ಲಿ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದು, ಜೊತೆಗೆ ಮೈಸೂರು ಬೆಂಗಳೂರು ಹೆದ್ದಾರಿ ಬಳಿ ಒಂದು ಸಣ್ಣ ಪೆಟ್ಟಿಗೆ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಾನೆ. ಹಿಂದಿ, ತೆಲುಗು ಭಾಷೆ ಗೊತ್ತಿದ್ದರೂ ಮನೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿದ್ದಾರೆ.

ಪ್ರತಿ ವರ್ಷ ನವೆಂಬರ್‌ ಒಂದರಂದು ಕರ್ನಾಟಕ ರಾಜ್ಯೋತ್ಸವವನ್ನು ಕಳೆದ 22 ವರ್ಷಗಳಿಂದ ಆಚರಿಸುತ್ತಾರೆ. ಅಲ್ಲದೇ, ಡಾ. ರಾಜಕುಮಾರ್‌ ಅವರ ಹುಟ್ಟು ಹಬ್ಬವನ್ನೂ ಆಚರಿಸುತ್ತಾರೆ. ಇನ್ನು ತನ್ನ ಅಂಗಡಿಗೂ ವರನಟ ಡಾ.ರಾಜಕುಮಾರ್‌ ಸ್ಟೋರ್‌ ಎಂದು ಹೆಸರಿಟ್ಟು ಕನ್ನಡ ಪ್ರೇಮೆ ಮೆರೆದಿದ್ದಾರೆ.

ಸನ್ಮಾನ: ಪಾವಗಡ ಮೂಲದ ಇವರು ಕಳೆದ 25 ವರ್ಷಗಳ ಹಿಂದೆ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದರು. ನವೆಂಬರ್‌ನ ಒಂದು ತಿಂಗಳು ಕನ್ನಡದ ದೊಡ್ಡ ಬಾವುಟವನ್ನು ತಮ್ಮ ಮನೆ ಮೇಲೆ ಹಾರಿಸುತ್ತಾರೆ. ರಾಜ್‌ ಹುಟ್ಟು ಹಬ್ಬವನ್ನು ಪಟ್ಟಣದ ಕುವೆಂಪು ವೃತ್ತದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಅಲ್ಲದೇ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಕರೆಸಿ ಸನ್ಮಾನ ಮಾಡುತ್ತಾರೆ. ರಾಜ್ಯೋತ್ಸವದಲ್ಲಿ ಸನ್ಮಾನ:ಒಂದು ದಿನ ಪೂರ್ತಿ ಕನ್ನಡ ನಟ ಡಾ.ರಾಜ್‌ ಅವರ ಅಪರೂಪದ ಭಾವಚಿತ್ರ ಪ್ರದರ್ಶನ, ಕಟೌಟ್‌ ಹಾಗೂ ಧ್ವನಿ ವರ್ಧಕದಲ್ಲಿ ಕನ್ನಡ ಹಾಡುಗಳನ್ನು ಕೇಳಿಸುತ್ತಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಅವರ ಆದರ್ಶಕ್ಕೆ ಹೆಚ್ಚಿನ ಒಲವು ತೋರುವ ಇವರನ್ನು ಕನ್ನಡ ಪರ ಸಂಘಟನೆ ಹಾಗೂ ತಾಲೂಕು ಆಡಳಿತ ಗುರುತಿಸಿ ರಾಜ್ಯೋತ್ಸವದಲ್ಲಿ ಸನ್ಮಾನಿಸಿವೆ.

Advertisement

ಪತ್ನಿಗೂ ಕನ್ನಡ ಪ್ರೇಮ: ಜಬ್ಟಾರ್‌ ಅವರ ಕಾರ್ಯಕ್ರಮಕ್ಕೆ ಅವರ ಪತ್ನಿ ಬಿ.ದಿಲಾದ್‌ ಬೇಗಂ, ಪುತ್ರಿ ಎಸ್‌.ಜೆ.ಷಾನ, ಪುತ್ರ ಮಹಮದ್‌ ಅಬ್ರಾಂ ಸಾಥ್‌ ನೀಡಿ ಸಹಕಾರ ನೀಡುತ್ತಿರುವುದು ಕನ್ನಡ ಅಭಿಮಾನ ಬೆಳಗುವ ಯತ್ನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next