Advertisement
ಈ ನಡುವೆ ಸಜಾ ಬಂಧಿಯಾಗಿ ನಾಲ್ಕು ವರ್ಷಗಳ ಜೈಲಿನಲ್ಲಿದ್ದ “ಚಿನ್ನಮ್ಮ’ ಸುಮ್ಮನೆ ಕೂತಿರಲಿಲ್ಲ. ಬದಲಿಗೆ ಕನ್ನಡ ಕಲಿತಿದ್ದಾರೆ. ತೋಟಗಾರಿಕೆ, ಕರಕುಶಲ ಕಲೆಗಳನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
Related Articles
Advertisement
ತರಕಾರಿ ಬೆಳೆದ ಶಶಿಕಲಾ: ಅಲ್ಲದೆ, ಒಂದು ಕಾಲದಲ್ಲಿ ಚಿನ್ನಮ್ಮ ಕೈಗೊಬ್ಬ, ಕಾಲಿಗೊಬ್ಬ ಆಳುಕಾಳು ಇಟ್ಟುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರುಆದರೆ ಈಗ ಸಾಮಾನ್ಯ ಮಹಿಳೆಯಂತೆ ಟೈಲರಿಂಗ್, ಎಂಬ್ರಾಯಿಡರಿ, ಕಂಪ್ಯೂಟರ್, ಕನ್ನಡ ಕಲಿಯುತ್ತ, ಆಕರ್ಷಕವಾದ ಬಳೆಗಳು, ಕಿವಿಯೋಲೆತಯಾರಿಸಿದ್ದಾರೆ. ತೋಟದಲ್ಲಿ ಸಹ ಕೈದಿಗಳ ಜತೆ ಸೇರಿ ಕಲ್ಲಂಗಡಿ, ಅಣಬೆ, ಸೊಪ್ಪು, ತರಕಾರಿ ಬೆಳೆದಿದ್ದಾರೆ.
ನಿತ್ಯ ಕನ್ನಡ ಪತ್ರಿಕೆ ಓದುವ ಅಭ್ಯಾಸ: 2016ರಲ್ಲಿ ಜಯಲಲಿತಾ ಅವರು ನಿಧನವಾದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಅವರು, ನಿಧಾನವಾಗಿ ಚೇತರಿಸಿಕೊಂಡರು. ಎಲ್ಲರೊಂದಿಗೆ ಬೆರೆಯುತ್ತ ತೋಟಗಾರಿಕೆ, ಕರಕುಶಲ ಕಲೆಗಳಲ್ಲಿ ಆಸಕ್ತಿಹೊಂದಿದರು. ನಿತ್ಯ ಬೆಳಗ್ಗೆ 6.30ರ ಸುಮಾರಿಗೆಏಳುವ ಅವರು, ತಮ್ಮ ಕೊಠಡಿಯ ಮುಂಭಾಗದಲ್ಲಿರುವ ಪಡಸಾಲೆಯನ್ನು ಗುಡಿಸುತ್ತಾರೆ. ಬಳಿಕ ಬ್ಯಾರಕ್ ಕೊಠಡಿಯಲ್ಲಿನ ದೇವರ ಪೂಜೆ ನೆರವೇರಿಸುತ್ತಾರೆ. ನಂತರ ತಮ್ಮ ಸಂಬಂಧಿ ಇಳವರಸಿ ಹಾಗೂ ಇತರ ಜತೆ ಸೇರಿ ಉಪಾಹಾರ ಸೇವಿಸಿ ಬ್ಯಾರಕ್‌ಗೆ ಮರಳುತ್ತಾರೆ. ಈ ಮಧ್ಯೆ ಜೈಲಿನ ಶಾಲೆಗೆ ಹೋಗಿ ಕಂಪ್ಯೂಟರ್, ಕನ್ನಡ ಕಲಿಕೆ ಹಾಗೂ ದಿನಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ವಿಶೇಷ ಬಳೆ, ಕಿವಿಯೋಲೆ: ಶಶಿಕಲಾ ಅವರಿಗೆ ತೋಟಗಾರಿಕೆ ಜತೆಗೆ ಬಳೆಗಳು, ಕಿವಿಯೋಲೆತಯಾರಿಸುವುದೆಂದರೆ ಬಹಳ ಇಷ್ಟ. ಹೀಗಾಗಿ ವಿಭಿನ್ನ, ವಿಶೇಷ ರೀತಿಯ ಬಳೆಗಳು, ಕಿವಿಯೊಳೆ ತಯಾರಿಸುತ್ತಾರೆ. ಬೇರೆಯವರಿಗೂ ಕಲಿಸಿಕೊಡುತ್ತಿದ್ದಾರೆ. ಇದರೊಂದಿಗೆ ಸಜಾಬಂಧಿಗಳಿಗೆ ಟೈಲರಿಂಗ್ ಮತ್ತು ಇನ್ನಿತರ ಕೆಲಸಗಳ ಬಗ್ಗೆ ಕಾರಾಗೃಹದಲ್ಲಿ ತರಬೇತಿ ನೀಡಲಾಗುತ್ತದೆ. ಶಶಿಕಲಾ ಅವರು ಜೈಲಿನಲ್ಲಿ ನಿತ್ಯ ಎರಡು ತಾಸು ಟೈಲರಿಂಗ್ ಮತ್ತು ಕಸೂತಿ (ಎಂಬ್ರಾಯಿಡರಿ) ಮಾಡುವ ಬಗ್ಗೆ ತರಬೇತಿ ಪಡೆಯುತ್ತಿದ್ದರು. ಕೆಲವು ಬಟ್ಟೆಗಳಿಗೆ ಕಸೂತಿ ಹಾಕಿದ್ದಾರೆ. ಆಕರ್ಷಕ ಬಳೆಗಳು, ಕಿವಿಯೋಲೆ ತಯಾರು ಮಾಡಿ ಸಂಭ್ರಮ ಪಡುತ್ತಿದ್ದರು.
ಚಿಪ್ಪು ಅಣಬೆ ಬೇಸಾಯ : ಶಶಿಕಲಾ ಅವರಿಗೆಅಣಬೆ ಬೆಳೆಯುವುದು ಎಂದರೆ ಬಹಳ ಇಷ್ಟ. ಅವರೇ ಹೇಳಿಕೊಂಡಂತೆ ಮೊದಲಿನಿಂದಲೂ ಅಣಬೆ ಕೃಷಿಯಲ್ಲಿ ಬಹಳ ಆಸಕ್ತಿ. ಹೀಗಾಗಿ ತಾವೇಕೊಠಡಿಯೊಂದರಲ್ಲಿ ಸಣ್ಣ ಕುಂಡಗಳಲ್ಲಿ ಚಿಪ್ಪು ಅಣಬೆ ಬೆಳೆದಿದ್ದರು. ಜತೆಗೆ ಮಹಿಳಾ ಬ್ಯಾರಕ್ ಪಕ್ಕದಲ್ಲಿರುವ ತೋಟದಲ್ಲಿ ಪ್ರತ್ಯೇಕವಾಗಿ ಕಲ್ಲಂಗಡಿ ಬೆಳೆಯುತ್ತಿದ್ದರು. ಈ ಮೂಲಕ ಹಣ ಕೂಡ ಗಳಿಸಿದ್ದಾರೆ.
ಮೋಹನ್ ಭದ್ರಾವತಿ