ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಮಂಗಳವಾರ ಪ್ರತಿಭಟಿಸಲಾಯಿತು. ಪಾಸ್‌ಬುಕ್, ಚಲನ್, ಚೆಕ್‌ಬುಕ್‌ಗಳಲ್ಲಿ
ಕನ್ನಡದ ಬದಲು ಹಿಂದಿ, ಇಂಗ್ಲಿಷ್ ರಾರಾಜಿಸುತ್ತಿದೆ. ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಇಲ್ಲಿನ ಸಿಬ್ಬಂದಿ ಬೇರೆ ಭಾಷೆಗಳಲ್ಲೇ
ವ್ಯವಹರಿಸುತ್ತಿದ್ದಾರೆ. ಇದು ನಾಡದ್ರೋಹವಾಗಿದ್ದು, 15 ದಿನಗಳಲ್ಲಿ ಪಾಸ್‌ಬುಕ್, ಚಲನ್, ಚೆಕ್‌ಗಳನ್ನು ಕನ್ನಡದಲ್ಲಿ ಮುದ್ರಿಸದಿದ್ದರೆ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್ ಎಚ್ಚರಿಸಿದರು.
Advertisement