Advertisement
ಕನ್ನಡವನ್ನು ಆಡಳಿತದ ಎಲ್ಲ ಮಟ್ಟದಲ್ಲೂ ಅನುಷ್ಠಾನ ಮಾಡಬೇಕು. ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಅಧಿಕಾರಿಗಳು ಆಡಳಿತದಲ್ಲಿ ಕನ್ನಡ ಬಳಕೆ ಮತ್ತು ಅನುಷ್ಠಾನದ ಲೋಪವೆಸಗಿದರೆ, “ಕರ್ತವ್ಯ ಲೋಪ’ ಎಂದು ಪರಿಗಣಿಸಲು ಅವಕಾಶವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಸಿದೆ.
Related Articles
Advertisement
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಅಧೀನ ಕಾರ್ಯದರ್ಶಿ ಸಿಬಂದಿ ಮತ್ತು ಆಡಳಿತ ಸುಧಾರಣೆ, ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಿರ್ದೇಶಕ, ಹಿಂದುಸ್ಥಾನ್ ಏರೋನಾಟಿಕಲ್ ಜಿಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೈಸೂರು ಹಾಗೂ ಭಾರತೀಯ ಭಾಷಾ ಸಂಸ್ಥಾನ (ಮೈಸೂರು) ನಿರ್ದೇಶಕರು.
114 ಜನರಿಗೆ ನೋಟಿಸ್ ಜಾರಿ :
ಸರಕಾರದ ಮಟ್ಟದಿಂದ ಸ್ಥಳೀಯ ಮಟ್ಟದ ಅಧಿಕಾರಿಗಳವರೆಗೆ ಆಡಳಿತದಲ್ಲಿ ಕನ್ನಡ ಬಳಸದೆ, ಆಂಗ್ಲ ಭಾಷೆಯಲ್ಲಿ ಆದೇಶ, ಸುತ್ತೋಲೆ ಹಾಗೂ ಮಾರ್ಗಸೂಚಿ ಸೇರಿ ಆಡಳಿತಾತ್ಮಕ ನಿರ್ಧಾರಗಳನ್ನು ತಿಳಿಸಲು ಆಂಗ್ಲ ಭಾಷೆ ಬಳಸಿದ ಆರೋಪದ ಮೇಲೆ 114 ಜನರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಕೆಲವರು ಕ್ಷಮಾಪಣ ಪತ್ರ ಸಲ್ಲಿಸಿರುವುದರಿಂದ ನಿರ್ದಿಷ್ಟ ಪ್ರಕರಣಗಳನ್ನು ಪ್ರಾಧಿಕಾರ ಕೈಬಿಟ್ಟಿದೆ.
ಕನ್ನಡ ಬಳಸದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಅವರ ವೃತ್ತಿ ಪ್ರಮಾಣ ಪತ್ರಗಳಲ್ಲಿ ಈ ತಪ್ಪನ್ನು ಉಲ್ಲೇಖ ಮಾಡಬೇಕು. ಜತೆಗೆ ಕನ್ನಡ ಅನುಷ್ಠಾನ ಸಮಿತಿ ಸಭೆ ನಡೆಸುವಂತೆ ಸರಕಾರಕ್ಕೆ ಕೋರಲಾಗಿದೆ. ಸಭೆಯಲ್ಲಿ ಎಲ್ಲ ವಿಷಯಗಳನ್ನು ವಿವರಿಸಲಾಗುವುದು. – ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
ಹಿತೇಶ್ ವೈ