Advertisement
ನಗರದ ಸ್ಪೂರ್ತಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಮ್ಮಿ ಕೊಂಡಿದ್ದ ‘ಸರ್ಕಾರಿ ಶಾಲೆಗಳ ವಿಲೀನ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭ- ಪರಿಣಾಮಗಳು’ ಎಂಬ ವಿಷಯದಲ್ಲಿ ನಡೆದ ಚಿಂತನ ಗೋಷ್ಠಿಯಲ್ಲಿ ಮಾತನಾಡಿದರು.
Related Articles
Advertisement
ರೈತಪರ ಹೋರಾಟಗಾರ್ತಿ ಅನಸೂ ಯಮ್ಮ, ಇಂಗ್ಲಿಷ್ ಮಾಧ್ಯಮವನ್ನು ಸರ್ಕಾರವೇ ಉತ್ತೇಜನ ನೀಡಿದಂತಾಗಿದೆ ಎಂದು ವಿಷಾದಿಸಿದರು.
ಕರಳು ಬಳ್ಳಿಯ ಸಂಬಂಧ: ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ.ಎಚ್.ರಾಜಶೇಖರ್ ಮಾತನಾಡಿ, ಭಾಷೆ ಎನ್ನುವುದು ವ್ಯವಹಾರ ಮತ್ತು ಉದ್ಯೋಗಕ್ಕೆ ಸೀಮಿತವಲ್ಲ, ಇದು ಕರುಳು ಬಳ್ಳಿಯ ಸಂಬಂಧ ಎಂಬ ಭಾವನೆ ಮೂಡಬೇಕು. ಇಂಗ್ಲಿಷ್ ಒಂದು ಭಾಷೆಯಾಗಿಕಲಿಯು ವುದು ತಪ್ಪಲ್ಲ. ಆದರೆ ಇಂಗ್ಲಿಷ್ ಮಾಧ್ಯಮ ಪ್ರಾರಂಭ ಮಾಡುತ್ತಿರುವುದರಿಂದ ಮೊದಲೇ ಐಸಿಯುನಲ್ಲಿದ್ದ ಸರ್ಕಾರಿ ಶಾಲೆಗಳು ಸರ್ವನಾಶವಾಗಲಿವೆ ಎಂದರು.
ಖಾಸಗಿ ಶಾಲೆಗಳ ಆಮಿಷ: ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಮಾತನಾಡಿ, ಖಾಸಗಿ ಶಾಲೆಯಲ್ಲೂ ಸಾಕಷ್ಟು ಲೋಪದೋಷಗಳಿವೆ. ಆದರೆ, ಉತ್ತಮ ಶಾಲೆಯೆಂದು ಬಿಂಬಿಸಿಕೊಳ್ಳುವ ಜತೆಗೆ ವಿವಿಧ ಆಮಿಷ, ಭರವಸೆ ನೀಡುವ ಮೂಲಕ ಪಾಲಕರನ್ನು ಆಕರ್ಷಿಸುವ ಕಾರ್ಯ ಮಾಡುತ್ತಿವೆ ಎಂದು ದೂರಿದರು. ಅಲ್ಲದೇ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗು ತ್ತಿದ್ದಂತೆ ಖಾಸಗಿ ಶಾಲೆಗಳಿಗೆ ಆತಂಕ ಶುರು ಎಂದರು.
ಎಸ್‌ಡಿಎಂಸಿ ಸಂಘದ ಜಿಲ್ಲಾಧ್ಯಕ್ಷ ಗೋಪಾಲ್, ಸಿ.ವಿ. ಜಯಣ್ಣ, ನರಸಿಂಹ ಸ್ವಾಮಿ, ಸೈಯದ್ ಮಹಮದ್, ವಸಂತಕುಮಾರ, ಡಾ.ಅಂಕನಹಳ್ಳಿ ಪಾರ್ಥ, ಎಚ್. ಪಿ.ನಂಜೇಗೌಡ ಮತ್ತಿತರರು ಮಾತನಾಡಿದರು.
ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆದಿರುವುದು ಬಡ-ಮಧ್ಯಮ ವರ್ಗಗಳ ಮಕ್ಕಳಿಗೆ ಅನುಕೂಲ ವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆ ಅನಿವಾರ್ಯತೆ ಇರುವುದರಿಂದ ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯವಿದೆ. ಆದರೆ ಕನ್ನಡದ ಬಗ್ಗೆ ತಾತ್ಸರ ಸಲ್ಲದು ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜ್, ಗೌರವ ಕಾರ್ಯ ದರ್ಶಿ ಎಚ್.ಎಸ್.ರೂಪೇಶ್ ಕುಮಾರ್, ಮಾಗಡಿ ಘಟಕದ ಅಧ್ಯಕ್ಷೆ ಕಲ್ಪನಾ, ಚನ್ನಪಟ್ಟಣ ಘಟಕದ ಅಧ್ಯಕ್ಷ ಮತ್ತಿಕೆರೆ ಚಲುವರಾಜು, ನಿವೃತ್ತ ಪ್ರಾಚಾರ್ಯ ಎಸ್.ಎಲ್.ವನರಾಜು, ವಿವಿಧ ಶಾಲೆಗಳ ಶಿಕ್ಷಕರು ಇದ್ದರು.