Advertisement

ಕನ್ನಡ ಶಾಲೆ; ಸಿಎಂ ಕುಮಾರಸ್ವಾಮಿ ಪ್ರಶ್ನೆಗೆ ಸಾಹಿತಿ ಚಂಪಾ ನೇರ ಉತ್ತರ

09:58 AM Jan 05, 2019 | Sharanya Alva |

ಧಾರವಾಡ/ಹುಬ್ಬಳ್ಳಿ:ಕನ್ನಡ ವೃಕ್ಷದ ಪಾಲಿಗೆ ಸಿಎಂ ಕುಮಾರಸ್ವಾಮಿ ಕುಠಾರಸ್ವಾಮಿಯಾಗದಿರಲಿ ಎಂದು ಹೇಳಿದ್ದ ಚಂದ್ರಶೇಖರ್ ಪಾಟೀಲ್ ಅವರ ಹೇಳಿಕೆಗೆ ಸಿಎಂ ಶನಿವಾರ ತಿರುಗೇಟು ನೀಡಿದ್ದಾರೆ.

Advertisement

ಹುಬ್ಬಳ್ಳಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಂಪಾ ಅವರನ್ನೇ ಕೇಳುತ್ತೇನೆ, ಅವರ ಮೊಮ್ಮಕ್ಕಳು ಯಾವ ಶಾಲೇಲಿ ಓದುತ್ತಾರೆಂದು ಹೇಳಲಿ. ಈ ಬಗ್ಗೆ ಜನರ ಮುಂದೆ ಮಾಹಿತಿ ನೀಡಲಿ. ನಾನು ಕನ್ನಡ ಭಾಷೆ ಉಳಿಸಿಕೊಳ್ಳಲು ತಯಾರಿದ್ದೇನೆ ಎಂದು ಹೇಳಿದ್ದೆ.

ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯರಾದ ಅವರು ಇಲ್ಲ, ಸಲ್ಲದ ಮಾತುಗಳನ್ನು ಆಡಬಾರದು. ಕನ್ನಡ ಭಾಷೆ ಶಿಕ್ಷಣ ರಾಷ್ಟ್ರೀಕರಣವಾಗಬೇಕು ಎಂಬ ಬಗ್ಗೆ ಠರಾವು ಪಾಸು ಮಾಡಲಿ ಎಂದು ಹೇಳಿದರು.

ಒಂದು ಸಾವಿರ ಆಂಗ್ಲಮಾಧ್ಯಮ ಶಾಲೆಗಳನ್ನು ಆರಂಭಿಸಲಾಗುವುದು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಚಂಪಾ ಅವರು ಶುಕ್ರವಾರ ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಸಿಎಂ ತಿರುಗೇಟಿಗೆ ಚಂಪಾ ಹೇಳಿದ್ದೇನು?

Advertisement

ಚಂಪಾರ ಮೊಮ್ಮಕ್ಕಳು ಯಾವ ಶಾಲೇಲಿ ಓದುತ್ತಾರೆಂದು ಹೇಳಲಿ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನಗಿರುವುದು ಒಬ್ಬನೇ ಮೊಮ್ಮಗ. ಆತ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಕಲಿತಿದ್ದಾನೆ. ಈಗ ಎಂಎ ಪದವಿ ಮುಗಿಸಿದ್ದಾನೆ. ನಾನು ಕುಮಾರಸ್ವಾಮಿಯವರ ವಿರುದ್ಧ ಮಾತನಾಡಿಲ್ಲ, ರಾಜಕಾರಣಿಗಳಿಗೆ ಭಾಷೆಯ ವ್ಯಾಕರಣ ಗೊತ್ತಾಗಲ್ಲ. ಕುಠಾರಸ್ವಾಮಿ ಆಗಬಾರದು ಅಂದರೆ ಕನ್ನಡದ ವೃಕ್ಷಕ್ಕೆ ಕೊಡಲಿ ಏಟು ಹಾಕುವ ಕೆಲಸ ಮಾಡಬಾರದು ಎಂಬ ಅರ್ಥದಲ್ಲಿ ಹೇಳಿದ್ದೆ ಎಂದರು. ಇದನ್ನು ಅರ್ಥಮಾಡಿಕೊಳ್ಳಬೇಕಾದ ಸಂವೇದನೆ ಸಿಎಂಗೆ ಬರಬೇಕಾಗಿದೆ. ಕನ್ನಡ ಭಾಷೆ ಶಿಕ್ಷಣ ರಾಷ್ಟ್ರೀಕರಣವಾಗಬೇಕೆಂಬ ಠರಾವನ್ನು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next