Advertisement

ಕನ್ನಡ ಜಾನಪದ ಉತ್ಸವ: ಗ್ರಾಮೀಣ ಕಲೆಗಳ ಅನಾವರಣ 

07:25 AM Sep 11, 2017 | |

ಕುಂಬಳೆ: ಕೃಷಿ ಪ್ರಧಾನ ಪ್ರದೇಶವಾದ ಕುಡಾಲು ಮೇರ್ಕಳ ಗ್ರಾಮದ ಸುಬ್ಬಯಕಟ್ಟೆಯಲ್ಲಿ ಶನಿವಾರದಂದು ಜರಗಿದ ಓಣಂ ಕನ್ನಡ ಜಾನಪದ ಉತ್ಸವವು ಕೇರಳ ಕರ್ನಾಟಕ ಉಭಯ ರಾಜ್ಯಗಳ ಗ್ರಾಮೀಣ ಕಲೆಗಳನ್ನು ಅನಾವರಣಗೊಳಿಸಿತು.

Advertisement

ಕೇರಳದ ಹಳ್ಳಿಯ ಕಲೆಗಳಾದ ಆದಿವಾಸಿ ನೃತ್ಯ, ಎಲೆ ನೃತ್ಯ, ಬಾಲೆ ಸಾಂತು, ಮಾರಿಯಾಟಂ, ತಾಲೀಮು ಪ್ರದರ್ಶನಗಳೊಂದಿಗೆ ಕರ್ನಾಟಕದ ಮಡಿಕೇರಿಯ ಘಟ್ಟದ ಕಲೆಗಳಾದ ಉಮ್ಮತಟ್ಟು, ಕೋಲಾಟ, ಗೆಜ್ಜೆತಂಡು, ಕತ್ತಿಯಾಟು, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆಗಳ ಮೂಲಕ ತಂಡಗಳ ಕಲಾವಿದರು ಮನೋರಂಜನೆಯೊಂದಿಗೆ ವಿವಿಧ ಭಂಗಿಗಳ ಮೂಲಕ ಸಾಹಸ ಪ್ರದರ್ಶಿಸಿ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದರು. 

ಕೇರಳ ಕರ್ನಾಟಕ ಅಂತರಾಜ್ಯ ಕಲಾವಿ ದರು ಮೇಳೈಸಿದ ಕಾರ್ಯಕ್ರಮವನ್ನು ವೀಕ್ಷಿಸಲು ದೂರದೂರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಕಾರ್ಯಕ್ರಮಕ್ಕೆ ಮುನ್ನ ಸಿಂಗಾರಿ ಮೇಳದೊಂದಿಗೆ ಸುಬ್ಬಯಕಟ್ಟೆಯಿಂದ ಕಾರ್ಯಕ್ರಮ ಜರಗಿದ ವಿದ್ಯಾಲಯಕ್ಕೆ ತಾಳಮೇಳ ಮುತ್ತು ಕೊಡೆಗಳೊಂದಿಗೆ ಸಾಗಿದ ಆಕರ್ಷಕ ಜಾನಪದ ಸಾಂಸ್ಕೃತಿಕ ಮೆರವಣಿಗೆಯನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರು ಚೆಂಡೆ ಬಾರಿಸಿ ಕಲಾವಿದರಿಗೆ ಮುತ್ತು ಕೊಡೆಯನ್ನು ನೀಡುವ ಮೂಲಕ ಉದ್ಘಾಟಿಸಿದರು.  ಓಣಂ ಕನ್ನಡ ಜಾನಪದ ಉತ್ಸವವನ್ನು ಕರ್ನಾಟಕ ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿಯವರು ಮಹಿಳೆಯರು ಆಕರ್ಷಕವಾಗಿ ರಚಿಸಿದ ಓಣಂಪೂಕಳಂನ ಮುಂದೆ ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಬಳಿಕ ಸಮಾರಂಭದಲ್ಲಿ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಾಧಕರನ್ನು ಸಮ್ಮಾನಿಸಲಾಯಿತು. ಬಳಿಕ ನಡೆದ ಓಣಂ ಭೋಜನ ಕೂಟದಲ್ಲಿ ಸುಮಾರು 25ಕ್ಕೂ ಹೆಚ್ಚು ಭಕ್ಷ-ಬೋಜ್ಯಗಳನ್ನು ಉಣಬಡಿಸಲಾಯಿತು. ಜಾತಿಮತ ಭೇದವೆನ್ನದೆ ವಿಶ್ವಾದ್ಯಂತ ಆಚರಿಸುವ ಓಣಂ ಮೂಲಕ ಸಾಮರಸ್ಯವನ್ನು ಗಟ್ಟಿಗೊಳಿಸುವ ಈ ಕಾರ್ಯಕ್ರಮವನ್ನು ಆತಿಥಿ ಅಭ್ಯಾಗ ತರ ಸಹಿತ ಭಾಗವಹಿಸಿದವರು ಮುಕ್ತಕಂಠ ದಿಂದ ಶ್ಲಾಘಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next