Advertisement
ಕರ್ನಾಟಕ ಜೈನ ಸಂಘದ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಸಮಿತಿಯು ಕರ್ನಾಟಕ ಜೈನ ಸಂಘದ ಸಹಯೋಗದಲ್ಲಿ 2 ದಿನ ಕನ್ನಡ ಜೈನ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಸಾಹಿತಿ ಡಾ.ಜಿನದತ್ತ ದೇಸಾಯಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಶುಕ್ರವಾರ ಚಾವುಂಡರಾಯ ಮಂಟಪದಿಂದ ಗೊಮ್ಮಟ ನಗರದ ಪಂಪ ಮಹಾಕವಿ ಸಭಾ ಮಂಟಪದವರೆಗೆ ಸಮ್ಮೇಳ ನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಸಮಾರೋಪ: ಭಾನುವಾರ ಸಂಜೆ 4.30ಕ್ಕೆ ಸಮಾರೋಪ ನಡೆಯಲಿದ್ದು, ಸಚಿವ ಎ.ಮಂಜು ಪಾಲ್ಗೊಳ್ಳಲಿದ್ದಾರೆ.
Related Articles
ಬೆಂಗಳೂರು: ವಿಶ್ವವಿಖ್ಯಾತ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಈವರೆಗೆ ಶೇ.70ರಷ್ಟು ಸಿದ್ಧತಾ ಕಾರ್ಯ ಮುಗಿದಿದ್ದು, ಫೆಬ್ರವರಿ ಮೊದಲ ವಾರದೊಳಗೆ ಸಕಲ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಎಂದು ಮಹೋತ್ಸವದ ಕಾರ್ಯಾಧ್ಯಕ್ಷ, ಜೈನ ಸಂಘದ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್ ಹೇಳಿದರು.
Advertisement
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾ ಮಸ್ತಕಾಭಿಷೇಕಕ್ಕೆ ವ್ಯವಸ್ಥಿತ ಸಿದ್ಧತೆ ನಡೆದಿದೆ. ಫೆ.7ರಿಂದ 16ರವರೆಗೆ ಪ್ರಥಮ ತೀರ್ಥಂಕರ ಆದಿನಾಥ ಭಗವಾನರಿಗೆ ಪಂಚಕಲ್ಯಾಣ ಮಹೋತ್ಸವ ನಡೆಯಲಿದೆ. ಫೆ.17ರಿಂದ 25ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.
ವ್ಯವಸ್ಥೆ: ಧಾರ್ಮಿಕ ವಿಧಿ ವಿಧಾನಗಳಿಗೆ ಶ್ರವಣಬೆಳಗೊಳ ಮಠವೇ ಖರ್ಚನ್ನು ಭರಿಸಲಿದ್ದು, ರಾಜ್ಯ ಸರ್ಕಾರದ 175 ಕೋಟಿ ರೂ. ಅನುದಾನವನ್ನು ಮೂಲ ಸೌಕರ್ಯ ಬಳಸಿಕೊಳ್ಳಲಾಗಿದೆ. ಮಹಾ ಮಸ್ತಕಾಭಿಷೇಕಕ್ಕೆ ಪೂರಕವಾಗಿ ಅಟ್ಟಣಿಗೆ ಜತೆಗೆ 5000 ಮಂದಿಗೆವೀಕ್ಷಣಾ ಗ್ಯಾಲರಿ ನಿರ್ಮಾಣವಾಗುತ್ತಿದೆ. 12 ತಾತ್ಕಾಲಿಕ ಉಪ ನಗರಗಳು ನಿರ್ಮಾಣವಾಗುತ್ತಿದ್ದು, 20,000 ಮಂದಿಗೆ ವಾಸ್ತವ್ಯ ಕಲ್ಪಿಸಲಾಗುವುದು. 22 ಶೌಚಾಲಯಗಳು ನಿರ್ಮಾಣವಾಗುತ್ತಿವೆ ಎಂದು ಹೇಳಿದರು. ಈ ಬಾರಿಯ ಮಹೋತ್ಸವದಲ್ಲಿ 35ರಿಂದ 40 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸುಮಾರು 450ಕ್ಕೂ ಹೆಚ್ಚು ದಿಗಂಬರ ಮುನಿಗಳು ಸಾವಿರಾರು ಕಿ.ಮೀ. ದೂರದಿಂದ ಕಾಲ್ನಡಿಗೆಯಲ್ಲೇ ಆಗಮಿಸಲಿದ್ದು, ಅವರಿಗೆ ತ್ಯಾಗಿ ನಗರದಲ್ಲಿ ವಾಸ್ತವ್ಯ ಕಲ್ಪಿಸಲಾಗುವುದು. ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ 21 ವಿಶೇಷ ರೈಲು ಸಂಚಾರ ಸೇವೆ ಆರಂಭವಾಗಲಿದೆ ಎಂದು ಹೇಳಿದರು. ಕೇಂದ್ರದಿಂದ 100 ಕೋಟಿ ರೂ.ಗೆ ಪ್ರಸ್ತಾವ: ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕೇಂದ್ರ ಸರ್ಕಾರದಿಂದ 100 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ.