ರಬಕವಿ-ಬನಹಟ್ಟಿ: ಕನ್ನಡ ಈ ನೆಲದ ಆಸ್ಮಿತೆಯಾಗಿದ್ದು, ಭಾವನೆಗಳ ಅಭಿವ್ಯಕ್ತಿ ಸೇರಿದಂತೆ ನವರಸಗಳಿಂದಾವೃತ
ಮೇರು ಕೃತಿಗಳಾಗಿವೆ ಎಂದು ರಬಕವಿ-ಬನಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ. ಕೃ. ಮೇಗಾಡಿ ಹೇಳಿದರು.
Advertisement
ಅವರು ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ಆಗಮಿಸಿದ ಕನ್ನಡ ಜ್ಯೋತಿ ಹೊತ್ತ ರಥಕ್ಕೆ ಪೂಜೆ ಸಲ್ಲಿಸಿ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಮೆರವಣಿಗೆಯಲ್ಲಿ ಸಂಗಾನಟ್ಟಿ ಹಲಗೆಮೇಳ ಮತ್ತು ಮಹಾಲಿಂಗಪುರ ಕರಡಿ ಕಲಾವಿದರು, ಗೊಂಬೆ ಕುಣಿತದ ಕಲಾವಿದರು, ಪುರಸಭೆ ಸದಸ್ಯರು, ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು, ಸಾಹಿತಿಗಳು, ಸಾರ್ವಜನಿಕರು, ಪತ್ರಕರ್ತರು ಭಾಗವಹಿಸಿದ್ದರು. ಪಟ್ಟಣದ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಪುರಸಭೆ ಮಾರ್ಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕರ್ನಾಟಕ ಜ್ಯೋತಿ ರಥಯಾತ್ರೆಯ ಮೆರವಣಿಗೆ ನಡೆಸಲಾಯಿತು.
ಸಿಆರ್‌ಪಿ ಎಸ್. ಎನ್.ಬ್ಯಾಳಿ, ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಸಪನಾ ಅನಿಗೋಳ, ವೀರೇಶ ಆಸಂಗಿ, ಅರವಿಂದ ಹೂಗಾರ, ಶಿವಾನಂದ ಮೆಳವಂಕಿ, ಚನಮಲ್ಲ ಕರಡಿ, ಸುವರ್ಣಾ ಆಸಂಗಿ, ರಾಜೇಶ ಭಾವಿಕಟ್ಟಿ, ಶ್ರೀನಿವಾಸ ಕಾಂಬಳೇಕರ, ಜಗದೀಶ ಪಾಟೀಲ, ವೈ.ವೈ.ಗಜ್ಜನ್ನವರ, ಲೋಕೇಶ ಹುಕುಮನವರ, ಪುರಸಭೆ ಅಧಿಕಾರಿಗಳಾದ ಎಸ್.ಎನ್.ಪಾಟೀಲ,ವ್ಹಿ.ಜಿ.ಕುಲರ್ಣಿ, ಸಿದ್ದು ಅಳ್ಳಿಮಟ್ಟಿ, ಮಹಾಲಿಂಗ ಮೂಗಳಖೋಡ, ರಾಜು ಹೂಗಾರ, ಸಿ.ಎಸ್.ಮಠಪತಿ, ಬಿ.ವೈ. ಮರದಿ, ಎಂ.ಕೆ.ದಳವಾಯಿ, ರವಿ ಹಲಸಪ್ಪಗೋಳ, ಚನ್ನಮ್ಮ ಪಟ್ಟಣಶೆಟ್ಟಿ, ಪ್ರೀತಿ ಹುಲಕುಂದ, ರಾಜೇಶ್ವರಿ ಸೋರಗಾಂವಿ, ರಾಮು ಮಾಂಗ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.