ಕಳುಹಿಸಿಕೊಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ವಾಟಾಳ್‌ನಾಗರಾಜ್ ಎಚ್ಚರಿಸಿದರು. ನಗರದ ಮೈಸೂರು ಬ್ಯಾಂಕ್ ವೃತ್ತದ ವಿಜಯನಗರ ಹೆಬ್ಟಾಗಿಲು ಬಳಿ ಕರ್ನಾಟಕ ರಾಜ್ಯೋತ್ಸವ ಸಮಿತಿ ಹಮ್ಮಿ
ಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಭುವನೇಶ್ವರಿ ಪೂಜೆ, ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡಿನ ಮೂಲಸೌಕರ್ಯ ಬಳಸಿಕೊಂಡು ಹತ್ತಾರು ವರ್ಷದಿಂದ ವಾಸಿಸುತ್ತಿರುವ ಅನೇಕ ಪರಭಾಷಿಗರು ಕನ್ನಡ ಕಲಿಯುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ.
Advertisement
ಅವರಿಗೆ ಕನ್ನಡ ಕಲಿಯಲು ಆಗದಿದ್ದರೆ, ಕನ್ನಡಿಗರೇ ದಂಗೆ ಎದ್ದು ಕಳುಹಿಸಬೇಕಾಗುತ್ತದೆ. ನಾವು ಯಾವುದೇಭಾಷೆಯ ವಿರೋಧಿ ಗಳಲ್ಲ. ಇಲ್ಲಿರ ಬೇಕಾದರೆ, ಕನ್ನಡ ಕಲಿಕೆ ಕಡ್ಡಾಯ ಎಂದರು. ಬೆಂಗಳೂರಿನ ವ್ಯಾಪಾರ ಸ್ಥಳಗಳಲ್ಲಿ ಸೇರಿದಂತೆ ಎಲ್ಲೆಡೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ಬಿಬಿಎಂಪಿ ನಾಮಫಲಕ
ಗಳಲ್ಲಿ ಕನ್ನಡ ಬಳಸದ ಅಂಗಡಿಗಳ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಮೇಯರ್ ಸಂಪತ್
ರಾಜ್ ಮಾತನಾಡಿದರು. ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ.ರಾ.ಗೋವಿಂದ್, ಕೆ.ಆರ್.ಕುಮಾರ್, ಪ್ರವೀಣ್‌ಕುಮಾರ್ ಶೆಟ್ಟಿ, ಮುನಿಯಪ್ಪಗೌಡ, ಡಿ.ಕೆ.ರಾಜು, ನಾರಾಯಣಸ್ವಾಮಿ, ಕಸಾಪ ಗೌರವ ಕಾರ್ಯದರ್ಶಿ ವ. ಚ.ಚನ್ನೇಗೌಡ ಇತರರು ಇದ್ದರು.