Advertisement

ವಾರಾಣಸಿಯಲ್ಲಿ ಕನ್ನಡ ಡಿಂಡಿಮ

09:37 AM Nov 09, 2019 | Team Udayavani |

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಗೆ ಪ್ರವಾಸ ಹೋದಾಗ ರೈಲು ನಿಲ್ದಾಣಗಳಲ್ಲಿ ಘೋಷಿಸಲಾಗುವ ಹಿಂದಿ ಭಾಷೆ ನಮಗೆ ಅರ್ಥವಾಗುವುದಿಲ್ಲ ಎಂಬ ಕಿರಿಕಿರಿ ಇನ್ನಿಲ್ಲ. ಏಕೆಂದರೆ ಇನ್ನು ಮುಂದೆ ಇಲ್ಲಿನ ರೈಲು ನಿಲ್ದಾಣದಲ್ಲಿ ಕನ್ನಡ ಭಾಷೆಯಲ್ಲೂ ಘೋಷಣೆಗಳನ್ನು ಆಲಿಸಬಹುದು.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ದಕ್ಷಿಣ ಭಾರತದಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಕಾರಣ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ. ಕನ್ನಡ ಮಾತ್ರವಲ್ಲದೆ, ದಕ್ಷಿಣದ ಭಾಷೆಗಳಾದ ತಮಿಳು, ತೆಲುಗು ಹಾಗೂ ಮಲಯಾಳದಲ್ಲೂ ಘೋಷಣೆಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಹಿಂದಿಯೇತರ ಭಾಷೆ ಮಾತನಾಡುವ ಜನರಿಗೆ ಸುಲಭವಾಗಲೆಂದು ರೈಲ್ವೇ ಇಲಾಖೆ ಈ ಕ್ರಮ ಕೈಗೊಂಡಿದೆ.

ವಾರಾಣಸಿಗೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಹಿಂದಿ ಯೇತರ ರಾಜ್ಯಗಳ ಜನರೇ ಹೆಚ್ಚು. ಈ ಪೈಕಿ ಬಹುತೇಕರಿಗೆ ಹಿಂದಿ ಅರ್ಥವಾಗುವುದಿಲ್ಲ. ರೈಲು ನಿಲ್ದಾಣಗಳಲ್ಲಿ ಹಿಂದಿ ಯಲ್ಲೇ ಘೋಷಣೆ ಮಾಡಲಾಗುವ ಕಾರಣ ಪ್ರವಾಸಿಗರು ಗೊಂದಲ ಕ್ಕೀಡಾಗುತ್ತಿದ್ದಾರೆ. ಹೀಗಾಗಿ ಅವರ ಅನುಕೂಲಕ್ಕಾಗಿ ಆರಂಭದಲ್ಲಿ 4 ಭಾಷೆಗಳಲ್ಲಿ ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಡಿಯಾ, ಮರಾಠಿ ಮತ್ತಿತರ ಭಾಷೆಗಳನ್ನು ಸೇರಿಸಲಾಗುವುದು ಎಂದು ಪ್ರಾದೇಶಿಕ ಕಂಟೋನ್ಮೆಂಟ್‌ ಸ್ಟೇಶನ್‌ನ ನಿರ್ದೇಶಕ ಆನಂದ್‌ ಮೋಹನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next