Advertisement
ಚಿತ್ರ ಸದ್ದಿಲ್ಲದೆ 25 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ಖುಷಿಯನ್ನು ಹಂಚಿಕೊಳ್ಳಲು ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಗ್ರೂಫಿ’ ಬಿಡುಗಡೆ ಬಳಿಕ ಸಿಗುತ್ತಿರುವ ಪ್ರತಿಕ್ರಿಯೆ, ಬೆಳವಣಿಗೆಗಳ ಬಗ್ಗೆ ಮಾತನಾಡಿತು.
Related Articles
Advertisement
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಡಿ.ರವಿ ಅರ್ಜುನ್, “ನಮ್ಮದು ಹೊಸಬರ ಸಿನಿಮಾವಾದರೂ, ನೋಡುಗರಿಗೆ ಹೊಸತರದ ವಿಷಯವನ್ನು ಏನಾದ್ರೂ ಸಿನಿಮಾದಲ್ಲಿ ಹೇಳಬೇಕು ಎಂಬ ಉದ್ದೇಶವಿತ್ತು. ಆ ಉದ್ದೇಶ ಈಡೇರಿದೆ. ಆಡಿಯನ್ಸ್ ಮಾತ್ರವಲ್ಲದೆ, ಸಿನಿಮಾರಂಗದ ಅನೇಕರು “ಗ್ರೂಫಿ’ಯನ್ನು ಮೆಚ್ಚಿಕೊಂಡಿದ್ದಾರೆ. ಒಂದು ಒಳ್ಳೆಯ ಸಿನಿಮಾ ಮಾಡಿದರೆ, ನಿಧಾನವಾಗಿ ಯಾದರೂ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬುದು ನಮಗೆ ಗೂತ್ತಾಗಿದೆ’ ಎಂದರು.
ವೇದಿಕೆಯಲ್ಲಿ ಹಾಜರಿದ್ದ ಫಿಲಂ ಚೇಂಬರ್‌ನ ಗೌರವ ಕಾರ್ಯದರ್ಶಿ ಎನ್. ಎಂ ಸುರೇಶ್ “ಗ್ರೂಫಿ’ ಚಿತ್ರದ ಬಗ್ಗೆ ಮತ್ತು ತಂಡದ ಪರಿಶ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಚಿತ್ರದ ನಾಯಕ ಆರ್ಯನ್ ಸೇರಿದಂತೆ ಕಲಾವಿದರು, ತಂತ್ರಜ್ಞರು ಹಾಜರಿದ್ದು, ಚಿತ್ರದ ಅನುಭವಗಳ ನ್ನು ಹಂಚಿಕೊಂಡರು.
ಒಂದೆಡೆ “ಗ್ರೂಫಿ’ಗೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡಕ್ಕೆ ಖುಷಿತಂದರೆ, ಮತ್ತೂಂದೆಡೆ ಕೆಲವು ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷೆಯ ಸಿನಿಮಾಗಳಿಂದಾಗಿ ನಮ್ಮ ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್ ಗಳು ಸಿಗುತ್ತಿಲ್ಲ ಎಂಬ ಬೇಸರವನ್ನೂ ಇದೇ ವೇಳೆ ಚಿತ್ರತಂಡ ರೆ ಹಾಕಿದೆ. ಆದರೂ ಈ ಎಲ್ಲ ಅಡೆತಡೆಗಳ ನಡುವೆಯೂ ಈ ವಾರದಿಂದ ಮತ್ತಷ್ಟು ಕೇಂದ್ರಗಳಲ್ಲಿ “ಗ್ರೂಫಿ’ಯನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೂಂಡಿದೆ.