Advertisement
ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಟ್ವೀಟ್ ಗಳನ್ನು ಮಾಡಿರುವ ಜಗ್ಗೇಶ್ ಅವರು ಬಾಲಿವುಡ್ ಗೆ ಮಾತ್ರ ಪ್ರಧಾನ್ಯತೆ ನೀಡಿರುವ ಪ್ರಧಾನಿ ಮೋದಿ ಅವರ ನಡೆಯನ್ನು ಪರೋಕ್ಷವಾಗಿ ಖಂಡಿಸಿದ್ದಾರೆ. ‘ಕನ್ನಡಿಗರು ಇಂದು ಬಹತೇಕ ಪರಭಾಷಾ ಸ್ಟಾರ್ ಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿತಪ್ಪಿದವರಂತೆ ಆಗಿದ್ದೇವೆ. ನರೇಂದ್ರ ಮೋದಿ ಜೀ, ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದರಲ್ಲೂ ಕಮ್ಮಿ ಇಲ್ಲಾ! ಶಾರುಖ್, ಆಮೀರ್ ಅಲ್ಲಾ ಕಲಾ ರಂಗಕ್ಕೆ ಒಡೆಯರು! ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ! ನಿಮ್ಮ ಭಾವನೆ ಗೌರವಿಸಲು’ ಎಂದು ಒಂದು ಟ್ವೀಟ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿ ಅವರು ಗಾಂಧೀಜಿ ಕುರಿತು ಕ್ರಿಯಾತ್ಮಕ ಆಲೋಚನೆಗಳನ್ನು ಹುಟ್ಟುಹಾಕಲು ಬಾಲಿವುಡ್ ಮಂದಿಯನ್ನಷ್ಟೇ ಆಹ್ವಾನಿಸಿದ್ದು ಜಗ್ಗೇಶ್ ಅವರ ಅಸಮಾಧಾನಕ್ಕೆ ಕಾರಣವಾದಂತಿದೆ. ಇನ್ನೊಂದು ಟ್ವೀಟ್ ನಲ್ಲಿ ಜಗ್ಗೇಶ್ ಅವರು ರಾಜ್ಯದಲ್ಲಿ ಅತೀಹೆಚ್ಚು ಮನರಂಜನಾ ವೆಚ್ಚ ಸಂಗ್ರವಾಗುತ್ತಿರುವುದು ನಮ್ಮ ಕನ್ನಡದ ನಟರಿಂದ ಹಾಗೂ ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಃ ಹಿಂದಿ ಚಿತ್ರಂಗದಿಂದ ಅಲ್ಲವೆಂಬ ಮಾತನ್ನು ಈ ಟ್ವೀಟ್ ನಲ್ಲಿ ಜಗ್ಗೇಶ್ ಅವರು ಉಲ್ಲೇಖಿಸಿದ್ದಾರೆ.