Advertisement

ಕನ್ನಡಕ್ಕೆ ಪೂರ್ಣ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿಲ್ಲ

12:18 PM Nov 05, 2018 | Team Udayavani |

ಮೈಸೂರು: ಪ್ರಾಚೀನ ಭಾಷೆಯಾದ ಕನ್ನಡಕ್ಕೆ ಇನ್ನೂ ಪೂರ್ಣ ಪ್ರಮಾಣದ ಶಾಸ್ತ್ರೀಯ ಸ್ಥಾನಮಾನ ಸಿಗಲಿಲ್ಲ ಎಂದು ಸಮಾಜ ಸೇವಕ ರಘುರಾಂ ವಾಜಪೇಯಿ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಪಾತಿ ಫೌಂಡೇಷನ್‌ ವತಿಯಿಂದ ಭಾನುವಾರ ಅಗ್ರಹಾರದ ಪದ್ಮಾ ಚಿತ್ರಮಂದಿರ ಮುಂಭಾಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂಸ್ಕೃತ ಭಾಷೆ ಹೊರತುಪಡಿಸಿದರೆ ಕನ್ನಡ ಎರಡನೇ ಪುರಾತನ ಭಾಷೆಯಾಗಿದೆ.

ಬ್ರಿಟಿಷರು ತಮ್ಮ ಆಡಳಿತಕ್ಕೆ ಅನುಕೂಲವಾಗುವ ರೀತಿಯಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯವನ್ನು 22 ಕಡೆಗಳಲ್ಲಿ ವಿಭಜಿಸಿದರು. ಈ ವೇಳೆ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ಒಂದು ಗೂಡಿಸುವ ಹೋರಾಟ ನಡೆಯಿತು.

ಈ ವೇಳೆ ಆಲೂರು ವೆಂಕಟರಾಯರು ಕನ್ನಡಿಗರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದರು. ಪರಿಣಾಮ ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಆದರೆ ಹಲವು ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಇಂದಿಗೂ ಪೂರ್ಣ ಪ್ರಮಾಣದ ಶಾಸ್ತ್ರೀಯ ಸ್ಥಾನಮಾನ ಸಿಗಲಿಲ್ಲ ಎಂದರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮಾತೃಭಾಷೆಯನ್ನು ಹುಡುಕುವ ಪರಿಸ್ಥಿತಿ ಬಂದಿದೆ. ಅನ್ಯ ಭಾಷಿಗರೊಂದಿಗೆ ಮಾತನಾಡುವ ವೇಳೆ ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನ ನಡೆಸುತ್ತಿದ್ದೇವೆ.

Advertisement

ಆದರೆ ರಾಜ್ಯದಲ್ಲಿರುವ ಬೇರೆ ಭಾಷಿಗರಿಗೆ ಕನ್ನಡ ಭಾಷೆಯನ್ನು ಕಲಿಸಲು ಪ್ರಯತ್ನ ಮಾಡುತ್ತಿಲ್ಲ. ಕನ್ನಡ ಭಾಷೆ ಬೆಳೆಸುವ ನಿಟ್ಟಿನಲ್ಲಿ ಇದನ್ನು ಬಳಸುತ್ತಾ ಹೋದರೆ ಭಾಷಾ ಬೆಳೆವಣಿಗೆಯೂ ಸಾಧ್ಯವಾಗಲಿದೆ ಎಂದು ಹೇಳಿದರು. ಇದಕ್ಕೂ ಮುನ್ನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗರನ್ನು ಸನ್ಮಾನಿಸಲಾಯಿತು.

ಪ್ರಮುಖವಾಗಿ ಮೈಕ್‌ ಚಂದ್ರು, ಪಾಲಿಕೆ ಸದಸ್ಯ ಲೋಕೇಶ್‌(ಪಿಯ), ಏರ್‌ಟೆಲ್‌ ಮಂಜು, ಮದನ್‌, ಆರಾಧ್ಯ ಮಲ್ಲಣ್ಣ, ಆಟೋ ಶ್ರೀನಿವಾಸ್‌, ಮಧುಸೂದನ್‌, ಸುರೇಶ್‌ ಅವರನ್ನು ಸನ್ಮಾನಿಸಿಸಲಾಯಿತು. ಬ್ರಾಹ್ಮಣ ಯುವ ಮುಖಂಡ ವಿಕ್ರಂ ಐಯಂಗಾರ್‌, ಹರೀಶ್‌ ನಾಯ್ಡು, ಶ್ರೀಕಾಂತ್‌ ಕಶ್ಯಪ್‌, ಧನರಾಜ್‌, ದೀಪಕ್‌, ನವೀನ್‌,  ಪದ್ಮನಾಭ, ಕಡಕೋಳ ಜಗದೀಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next