Advertisement

ಕನ್ನಡ ವಿಭಾಗ ಮುಂಬಯಿ ವಿವಿಯಿಂದ ವಾರ್ಷಿಕ  ಪದವಿ ಪ್ರದಾನ

04:52 PM Sep 26, 2017 | |

ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ವಾರ್ಷಿಕವಾಗಿ ಪ್ರದಾನಿಸುವ ಕನ್ನಡ ಸರ್ಟಿಫಿಕೇಟ್‌ ಪದವಿ ಪ್ರದಾನ ಕಾರ್ಯಕ್ರಮ ಸೆ. 23ರಂದು ಸಾಂತಾಕ್ರೂಜ್‌ ಕಲೀನಾ ಕ್ಯಾಂಪಸ್‌ ಲೆಕ್ಚರ್‌ ಕಾಂಪ್ಲೆಕ್ಸ್‌ನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ಜರಗಿತು.

Advertisement

ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ “ಅಕ್ಷಯ’ ಮಾಸಿಕದ ಸಂಪಾದಕ, ಹೆಸರಾಂತ ವಿಮರ್ಶಕ ಡಾ| ಈಶ್ವರ ಅಲೆವೂರು ಉಪಸ್ಥಿತರಿದ್ದು “ಕೃತಿ ವಿಮರ್ಶೆ’ ಬಗ್ಗೆ ಮಾತನಾಡಿ, ವಿಮರ್ಶೆಯಲ್ಲಿ ಸ್ವತ್ಛತೆ ಮೂಡಿರಬೇಕು. ಕೃತಿ ಬರವಣಿಗೆಯ ಕಾರಣಗಳನ್ನು ಕಂಡು ಹಿಡಿಯುವುದು ವಿಮರ್ಶೆಯ ಮೂಲವಾದರೆ, ಅಭಿಪ್ರಾಯಗಳನ್ನು ಮೂಡಿಸುವುದೇ ವಿಮರ್ಶೆಯ ಮೊದಲ ಹೆಜ್ಜೆಯಾಗಿದೆ. ಸಹೃದಯತೆ ಇಲ್ಲದವರು ಎಂದಿಗೂ ವಿಮರ್ಶಕವಾಗಲು ಸಾಧ್ಯವಿಲ್ಲ. ಕಾರಣ ಅವರ ದೃಷ್ಟಿಕೋನಗಳಿಂದ ಕೃತಿ, ಬರವಣಿಗೆ, ನಾಟಕ ಇತ್ಯಾದಿಗಳ ಹೊರ ನೋಟಗಳನ್ನು ಸೃಷ್ಟಿಸಿ ಬಲ್ಲವರಿಂದ ಸೂಕ್ತ ವಿಮರ್ಶಕತೆ ಸಾಧ್ಯ. ನೈಜತೆ ತೋರ್ಪಡಿಸುವವನೇ ನಿಜವಾದ ವಿಮರ್ಶಕ ಆಗಬಲ್ಲ ಎಂದು ನುಡಿದು  ತಮ್ಮ ಮೂರ್ನಾಲ್ಕು ದಶಕಗಳ ಹಿಂದಿನ ಕೃತಿ ವಿಮರ್ಶೆಯ ಅನುಭವಗಳನ್ನು ಹಂಚಿಕೊಂಡರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ರಂಗತಜ್ಞ ಡಾ| ಭರತ್‌ಕುಮಾರ್‌ ಪೊಲಿಪು ವಾರ್ಷಿಕ ಕನ್ನಡ ಸರ್ಟಿಫಿಕೆಟ್‌ ಪದವಿ ಪ್ರದಾನಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ವಿಮರ್ಶೆ ವಿಷಯ ನನ್ನ ಆಪ್ತ  ವಿಷಯ. ತೀಕ್ಷ್ಣ ವಿಮರ್ಶೆಯಿಂದ  ಶತ್ರುತ್ವ ಕಟ್ಟಿಕೊಳ್ಳಬೇಕಾದುದು ಅನಿವಾರ್ಯ.  ಒಳ್ಳೆಯ ವಿಮರ್ಶಕನು ಯಾವತ್ತೂ ಸಾಹಿತ್ಯ, ಬರವಣಿಗೆ, ನಾಟಕಗಳ ಅನುಭವಸ್ಥನಾಗಿ ವಿಮರ್ಶೆ ತಿಳಿಪಡಿಸಲು ಸಶಕ್ತನಾಗಿರುತ್ತಾನೆ. ಸಂವಾದ ಹುಟ್ಟುಹಾಕುವವನೇ ನಿಜವಾದ ವಿಮರ್ಶಕ ಆದುದರಿಂದ ವಿಮರ್ಶಕನಿಗೆ ಸೃಜನಾತ್ಮಕ ಶಕ್ತಿ ಅತ್ಯವಶ್ಯಕವಾಗಿದ್ದು, ಹೊಗಳಿಕೆ ಬೈಗಳು ಮೀರಿ ನಿಲ್ಲುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ವಿಮರ್ಶೆಯನ್ನು ವಿನಯಶೀಲತೆ, ಸಂಯಮದಿಂದ ಸ್ವೀಕರಿಸಿ ವಸ್ತುಸ್ಥಿತಿ ತುಲನೆ ಮಾಡುವುದೇ ವಿಮರ್ಶಕರ ಕರ್ತವ್ಯ ಎಂದು ಡಾ| ಪೊಲಿಪು ತಿಳಿಸಿದರು.

ವಿದ್ಯಾರ್ಥಿಗಳುಬರೇತರಗತಿಯೊಳಗಿನಸೀಮಿತವಾದಚೌಕಟ್ಟುದಾಟಿಇಂತಹಕೃತಿಸಮಿಕ್ಷೆವಿಮರ್ಶೆಗಳಪರಿಕಲ್ಪನೆತಿಳಿಯುವಅಗತ್ಯವಿದೆ.ಕರ್ನಾಟಕದಲ್ಲಿವಿಮರ್ಶಿತಕೃತಿಗಳುದೊಡ್ಡಪ್ರಮಾಣದಲ್ಲಿ ಪ್ರಕಟವಾಗುತ್ತಿವೆ.ಆದರೆ ವಿಮರ್ಶಕರ ಕೊರತೆ ಕಾಡುತ್ತಿದೆ. ಸಹೃದಯರಿಗೆ ಅಥವಾ ಓದುಗರಿಗೆ ಒಳ್ಳೆಯ ಕೃತಿ ಪರಿಚಯಿಸುವ ಅಗತ್ಯ ವಿಮರ್ಶಕರಿಂದ ಸಾಧ್ಯವಾಗುತ್ತೆ. ಕವಿ, ಕೃತಿ ಮತ್ತು ಸಹೃದಯತೆ ತ್ರಿವಳಿಯನ್ನು ಬೆಸೆಯುವ ಕೆಲಸ ಒಬ್ಬ ವಿಮಶ‌ìಕ ಮಾತ್ರ ಮಾಡಬಲ್ಲ. ಇಂಥ ಸಾಧನೆಗೆ ಸಾಂಸ್ಕೃತಿಕ ರಾಯಭಾರಿಗಿಂತ ಸಾಂಸ್ಕೃತಿಕ ನಾಯಕರ ಆವಶ್ಯಕತೆಯಿದೆ ಎಂದು ಡಾ| ಜಿ. ಎನ್‌. 
ಉಪಾಧ್ಯ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯಿಪಟ್ಟರು.
ಕನ್ನಡ ವಿಭಾಗವು ಕಳೆದ ಅನೇಕ ವರ್ಷಗಳಿಂದ ಕನ್ನಡೇತರರಿಗೆ ಮತ್ತು ಕನ್ನಡ ಅಭ್ಯಸಿಸಲು ಕನ್ನಡ ಕೋರ್ಸ್‌ ನಡೆಸುತ್ತ ಬಂದಿದೆ. ಅಂತೆಯೇ ಕಳೆದ ಎಪ್ರಿಲ್‌ನಲ್ಲಿ ನಡೆದ ಸರ್ಟಿಫಿಕೆಟ್‌ಗಳನ್ನು ಇಂದು ಪ್ರದಾನಿಸಲಾಗುವುದು ಎಂದು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ  ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಸರ್ಟಿಫಿಕೆಟ್‌ ಕೋರ್ಸ್‌ನ ಶಿಕ್ಷಕರಾದ ಶ್ರೀಪಾದ ಪತಕಿ, ಅನಿತಾ ಪಿ. 
ಪೂಜಾರಿ ತಾಕೋಡೆ, ಶಿವರಾಜ್‌ ಎಂ. ಜಿ, ಸುರೇಖಾ ಸುಂದರೇಶ್‌ ದೇವಾಡಿಗ, ಸುರೇಖಾ ಶೆಟ್ಟಿ, ಎಸ್‌. ನಳಿನಿ ಪ್ರಸಾದ್‌, ದಿನಕರ್‌ ಎನ್‌. ಚಂದನ್‌, ಸುಧೀರ್‌ ದೇವಾಡಿಗ, ಉದಯ ಬಿ. ಶೆಟ್ಟಿ, ಮುಕುಂದ ಎಸ್‌. ಶೆಟ್ಟಿ, ಲಕ್ಷ್ಮೀ  ಪೂಜಾರ್ತಿ, ಕೆ. ಗೋವಿಂದ ಭಟ್‌, ಜಯ ಪೂಜಾರಿ ಕೊಜಕೊಳ್ಳಿ, ಕರುಣಾಕರ 
ಹೆಜಮಾಡಿ ಮತ್ತಿತರ‌ರು ಉಪಸ್ಥಿತರಿದ್ದು, ಶ್ಯಾಮಲಾ ಪ್ರಕಾಶ್‌ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.  ಗೀತಾ ಆರ್‌. ಎಸ್‌ ಸರ್ಟಿಫಿಕೆಟ್‌ ಫಲಾನುಭವಿಗಳ ಯಾದಿಯನ್ನು  ವಾಚಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next