ಬೆಟಗೇರಿ: ಭಾಗೋಜಿಕೊಪ್ಪದ ಮಣ್ಣಿಗೆ ಒಂದು ದಿವ್ಯ ಶಕ್ತಿಯಿದ್ದು, ಇಂತಹ ಪುಣ್ಯ ನೆಲದ ‘ಕನ್ನಡ ದೀಪ’ ಪ್ರಶಸ್ತಿ ನನಗೆ ದೊರೆತಿರುವುದು ನನ್ನ ಭಾಗ್ಯ ಎಂದು ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಹಿತ್ಯ ದಿಗ್ಗಜ ಡಿ.ಎಸ್. ಕರ್ಕಿ, ಸಿ.ಕೆ. ಬಾಗೋಜಿ, ಅಥಣಿ ಶಿವಯೋಗಿಗಳು, ನಾಗನೂರ ಡಾ| ಶಿವಬಸವ ಮಹಾಸ್ವಾಮಿಜಿ ಹಾಗೂ ರಾಜಕಾರಣಿ ಎ.ಎಲ್.ಪಂಚಗಾಂವಿ ಸೇರಿದಂತೆ ಹಲವಾರು ಮಹನೀಯರನ್ನು ಈ ನಾಡಿಗೆ ನೀಡಿದ ಕೊಡುಗೆ ಭಾಗೋಜಿಕೊಪ್ಪ ಗ್ರಾಮಕ್ಕೆ ಸಲ್ಲುತ್ತದೆ ಎಂದರು.
ವೀರಭದ್ರ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಅಥಣಿಯ ಶಿವಯೋಗಿಗಳು ಕನ್ನಡ ನಾಡು ಕಂಡ ಓರ್ವ ಸರ್ವಶ್ರೇಷ್ಠ ಸಂತರು, ಪವಾಡ ಪುರುಷರು, ಬಡವರ ಕಾಮಧೇನು ಆಗಿದ್ದರು. ಅವರ ಜೀವನ ಆದರ್ಶ ತತ್ವಗಳನ್ನು ಭಕ್ತರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಭಾಗೋಜಿಕೊಪ್ಪ ಶಿವಯೋಗೀಶ್ವರ ಹಿರೇಮಠದ ಪೀಠಾಧ್ಯಕ್ಷ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕಿರುತೆರೆ ನಟಿ ದೀಪಿಕಾ ಅವರನ್ನು ಶ್ರೀಮಠದ ವತಿಯಿಂದ ಸತ್ಕರಿಸಲಾಯಿತು.
Advertisement
ಸಮೀಪದ ಭಾಗೋಜಿಕೊಪ್ಪದ ಶಿವಯೋಗೀಶ್ವರ ಹಿರೇಮಠದಲ್ಲಿ ನಡೆದ ‘ಕನ್ನಡ ದೀಪ’ ಪ್ರಶಸ್ತಿ ಪ್ರದಾನ, ಗುರುಲಿಂಗ ಸ್ವಾಮಿಗಳ ಪುಣ್ಯಾರಾಧನೆ ಹಾಗೂ ಶಿವಯೋಗೀಶ್ವರ ಹಿರೇಮಠದ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ 2018-19ನೇ ಸಾಲಿನ ‘ಕನ್ನಡ ದೀಪ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
Related Articles
Advertisement
ಈ ವೇಳೆ ಸತ್ತಿಗೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಸಗುಪ್ಪಿಯ ರೇಣುಕಾ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಚಿಪ್ಪಲಕಟ್ಟಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಪರಟ್ಟಿ ಬಸವರಾಜ ಹಿರೇಮಠ, ನಾಗನೂರಿನ ಕಾವ್ಯ ಅಮ್ಮನವರು, ಹೊಸೂರಿನ ಅನ್ನಪೂರ್ಣ ಮಾತೋಶ್ರೀ, ಉಮೇಶ ಕೊಳವಿ, ಮಹಾದೇವಗೌಡ ಪಾಟೀಲ, ಮಲ್ಲಿಕಾರ್ಜುನ ಗಾಣಗಿ ಇತರರು ಇದ್ದರು.