Advertisement
ಜು. 20 ರಂದು ಮಧ್ಯಾಹ್ನ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ವತಿಯಿಂದ ನಡೆದ ಅಂಬರ್‌ನಾಥ್ ಪಶ್ಚಿಮದ ಗಾಂವೆªàವಿ ಪರಿಸರದಲ್ಲಿರುವ ಅಂಬರ್‌ನಾಥ್ ಮಹಾನಗರ ಪಾಲಿಕೆಯ ಕನ್ನಡ ಶಾಲೆಯ ಮಕ್ಕಳಿಗೆ ಉಚಿತ ಶಾಲಾ ಪರಿಕರಗಳ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ. ಕಲ್ಯಾಣ್ ಪರಿಸರದ ಉದ್ಯಮಿ, ಸಮಾಜ ಸೇವಕ ಶ್ರೀಮತಿ ಶಾರದಾ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ ಶೆಟ್ಟಿ ಮತ್ತು ತೆರೆಮರೆಯ ಸಮಾಜ ಸೇವಕ ಶಂಕರ್ ಟಿ. ಶೆಟ್ಟಿ ಹಾಗೂ ನಮ್ಮ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ಅವರ ಸಹಾಯದಿಂದ ಈ ನಮ್ಮ ಯೋಜನೆ ಸಾಕಾರಗೊಂಡಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಜೊತೆಗೆ ನಮ್ಮಿಂದ ಈ ಸಣ್ಣ ಸಹಾಯವನ್ನು ಸ್ವೀಕರಿಸಿದ ಮಕ್ಕಳ ಹಾಗೂ ಪಾಲಕರ ಉಜ್ವಲ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
Related Articles
Advertisement
ಉಪಸ್ಥಿತರಿದ್ದ ಎಲ್ಲಾ 110 ಮಕ್ಕಳಿಗೆ ಶ್ರೀಮತಿ ಶಾರದಾ ಮೆಮೋರಿಯಲ್ ಟ್ರಸ್ಟ್ ಹಾಗೂ ಶಂಕರ ಟಿ. ಶೆಟ್ಟಿ ಅವರ ವತಿಯಿಂದ ಕೊಡಮಾಡಿದ ಉಚಿತ ಶೆಕ್ಷಣಿಕ ಪರಿಕರಗಳನ್ನು ಗಣ್ಯರು ವಿತರಿಸಿದರು. ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಪ್ರಕಾಶ್ ನಾೖಕ್ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳು ಪ್ರಾರ್ಥನೆಗೈದರು. ಮಕ್ಕಳಿಂದ ದೇಶ ಭಕ್ತಿಗೀತೆಗಳ ಗಾಯನ ನಡೆಯಿತು. ಕನ್ನಡ ಸಾಂಸ್ಕೃತಿಕ ಕೇಂದ್ರದ ಜತೆ ಕೋಶಾಧಿಕಾರಿ ಎಂ. ಆರ್. ಹೊಸಕೋಟಿ, ಕ್ರೀಡಾ ಕಾರ್ಯಾಧ್ಯಕ್ಷ ಚೆನ್ನವೀರ ಅಡಿಗಣ್ಣನವರ್, ಕಾರ್ಯದರ್ಶಿ ರವೀಂದ್ರ ವೈ. ಶೆಟ್ಟಿ, ಜೊತೆ ಕಾರ್ಯದರ್ಶಿ ಕುಂಠಿನಿ ಪ್ರಕಾಶ್ ಹೆಗ್ಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಬಿ. ಶೆಟ್ಟಿ, ಕಾರ್ಯದರ್ಶಿ ಗಿರಿಜಾ ವಿ. ಸೊಗಲದ, ಕಾರ್ಯಕಾರಿ ಸಮಿತಿಯ ಸದಸ್ಯೆ ಉಮಾ ಹುನ್ಸಿಮರ ಉಪಸ್ಥಿತರಿದ್ದರು. ಶಿಕ್ಷಕ ಶಂಕರ ಆರ್. ರಾಥೋಡ್, ಶಿಕ್ಷಕಿಯರಾದ ಜಯಂತಿ ದಾಂಡೇಕರ್, ಶ್ರೀದೇವಿ ಸ್ವಾಮಿ, ಪದ್ಮಜಾ ಪಾಚಾಪುರRರ್, ಕಮಲಾ ಪೂಜಾರಿ ಅವರು ಕೇಂದ್ರದ ಸದಸ್ಯರುಗಳಿಗೆ, ಅತಿಥಿಗಳನ್ನು ಪುಷ್ಪಗುಚ್ಚವನ್ನಿತ್ತು ಸ್ವಾಗತಿಸಿದರು. ಜಯಂತಿ ದಾಂಡೇಕರ್ ವಂದಿಸಿದರು.
ಯಾವುದೇ ಮಾಧ್ಯಮದಲ್ಲಿ ಕಲಿತರೂ ಇಲ್ಲಿ ಭಾಷೆ ಮುಖ್ಯವಾಗುವುದಿಲ್ಲ. ನಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ದೇಶದ ಒಳ್ಳೆಯ ಪ್ರಜೆಯಾಗುವುದು ಬಹಳ ಮುಖ್ಯ. ನಮ್ಮ ಜ್ಞಾನ ಭಂಡಾರವನ್ನ ಹೆಚ್ಚಿಸಿಕೊಳ್ಳುವುದು ಮುಖ್ಯ. ಸುಶೀಕ್ಷಿತರಾಗಿ ಬೆಳೆದು ಯೋಗ್ಯ ನಾಗರಿಕರಾಗುವುದು, ಸಂಸ್ಕಾರಯುತವಾದ ಬದುಕು ನಡೆಸುವುದು ಬಹಳ ಮುಖ್ಯ. ಶಿಕ್ಷಕರು ತಿಳಿಸಿದ ವಿಷಯಗಳನ್ನು ಚೆನ್ನಾಗಿ ಅರಗಿಸಿಕೊಂಡು ಉತ್ತಮ ಅಂಕಗಳನ್ನು ಪಡೆಯುವುದು ವಿದ್ಯಾರ್ಥಿಗಳ ಕರ್ತವ್ಯವಾಗಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ ಎಂಬ ಸಂಶಯ ಪಾಲಕರಿಗೆ ಬೇಡ. ಆದರೆ ಕನ್ನಡದ ಜೊತೆಗೆ ಇಂಗ್ಲೀಷ್ ಮತ್ತು ಮರಾಠಿ ಭಾಷೆಗಳನ್ನು ಕಲಿಯುವುದು ಬಹಳ ಮುಖ್ಯ. ಇಂದಿನ ಜಾಗತೀಕರಣದ ಯುಗದಲ್ಲಿ ಎಲ್ಲಾ ಭಾಷೆಗಳ ಅಗತ್ಯತೆಯಿದೆ.
– ಶಂಕರ ಟಿ. ಶೆಟ್ಟಿ, ಉದ್ಯಮಿ, ಸಮಾಜ ಸೇವಕ