Advertisement
ಕೋವಿಡ್ ಸಂಕಷ್ಟದ ಸಮಯದಲ್ಲಿ ನರ್ಸ್‌ಗಳು ಎದುರಿಸಿದ ಕಷ್ಟಗಳು, ಅವರ ತ್ಯಾಗ ಮತ್ತು ಸಾಧನೆಯ ಮೇಲೆ ಬೆಳಕು ಚೆಲ್ಲಲು ಹೊರಟಿರುವ “ಸೆಪ್ಟೆಂಬರ್ 13′ ಸಿನಿಮಾ ಇದೇ ನವೆಂಬರ್ 4ರಂದು ತೆರೆಗೆ ಬರುತ್ತಿದೆ.
Related Articles
Advertisement
“ಕನ್ನಡದಲ್ಲಿ ಇಲ್ಲಿಯವರೆಗೆ ಬೇರೆ ಬೇರೆ ಕ್ಷೇತ್ರದಲ್ಲಿ ಕಷ್ಟಪಟ್ಟವರ, ಸಾಧನೆ ಮಾಡಿದವರ ನೂರಾರು ಸಿನಿಮಾಗಳು ಬಂದಿವೆ. ಆದರೆ ನರ್ಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದವರ, ಸಾಧಕರ ಕುರಿತು ಯಾವುದೇ ಸಿನಿಮಾಗಳು ಬಂದಿಲ್ಲ. ಹಾಗಾಗಿ ನರ್ಸ್‌ಗಳ ನಿಸ್ವಾರ್ಥ ಸೇವೆ ಮತ್ತು ಸಾಧನೆಯನ್ನು ಪರಿಚಯಿಸುವುದಕ್ಕಾಗಿ ಈ ಸಿನಿಮಾ ನಿರ್ಮಿಸಿದ್ದೇವೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಜೊತೆಗೊಂದು ಸಂದೇಶ ಇರುವಂಥ ಸಿನಿಮಾ ಇದಾಗಿದೆ’ ಎನ್ನುವುದು ಚಿತ್ರತಂಡದ ಒಕ್ಕೊರಲ ಮಾತು.
ಈಗಾಗಲೇ “ಸೆಪ್ಟೆಂಬರ್ 13′ ಸಿನಿಮಾದ ಮೊದಲ ಪೋಸ್ಟರ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಸದ್ಯ ತನ್ನ ಪೋಸ್ಟರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ “ಸೆಪ್ಟೆಂಬರ್ 13′ ಚಿತ್ರವನ್ನು ಇದೇ ನವೆಂಬರ್ 4ರಂದು ತೆರೆಮೇಲೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಬಹಳ ಸಮಯದ ನಂತರ ವೈದ್ಯರು ಮತ್ತು ನರ್ಸಗಳ ವೃತ್ತಿ ಜೀವನವನ್ನು ತೆರೆಮೇಲೆ ತರಲು ಹೊರಟಿರುವ “ಸೆಪ್ಟೆಂಬರ್ 13′ ಥಿಯೇಟರ್‌ನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಮತ್ತು ಗಮನ ಸೆಳೆಯಲಿದೆ ಎಂಬುದು ನವೆಂಬರ್ ಮೊದಲವಾರ ಗೊತ್ತಾಗಲಿದೆ.