Advertisement

Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’

05:27 PM May 25, 2024 | Team Udayavani |

“ನಸಾಬ್‌’ ಹೀಗೊಂದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಕೀರ್ತಿಕುಮಾರ್‌ ನಾಯಕ್‌ ನಟಿಸಿದ್ದು, ಡಾ.ಹರೀಶ್‌ ನಿರ್ಮಾಣ ಮಾಡಿದ್ದಾರೆ.

Advertisement

“ನಸಾಬ್‌ ಚಿತ್ರದಲ್ಲಿ ನನ್ನ ತಮ್ಮ ಕೀರ್ತಿಕುಮಾರ್‌ ನಾಯಕ್‌ ಪ್ರಥಮಬಾರಿಗೆ ಅದ್ಭುತವಾದ ನಟನೆ ಮಾಡಿದ್ದಾನೆ. ಈ ಚಿತ್ರವು ಪ್ರತಿಯೊಬ್ಬರೂತಿ ಳಿದುಕೊಳ್ಳಬೇಕಾದಂಥ ಉತ್ತಮವಾದ ಕಥಾಹಂದರ ಹೊಂದಿದೆ. ನಮ್ಮ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಯಾವ ರೀತಿ ಒಳ್ಳೆತನದಿಂದ, ಜನಪರ ಕೆಲಸಗಳನ್ನು ಮಾಡುತ್ತಾ ಜನಪ್ರಿಯತೆ ಗಳಿಸಿ, ಅವರಿಗೆ ಹತ್ತಿರವಾದರು. ಚಿತ್ರ ನೋಡಿದ ಮೇಲೆ ಸಾವಿರಾರು ಜನ ಬದಲಾಗುತ್ತಾರೆ’ ಎನ್ನುವುದು ನಿರ್ಮಾಪಕ ಡಾ.ಹರೀಶ್‌ ಮಾತು.

ಕೆ.ಕಿಶೋರ್‌ ಕುಮಾರ್‌ ನಾಯಕ್‌ ಮಾತನಾಡುತ್ತಾ, “ನಸಾಬ್‌ ಅಂದರೆ ಕಟ್ಟೆ ಪಂಚಾಯ್ತಿ ಅಥವಾ ನ್ಯಾಯ ಎಂದರ್ಥವಿದೆ. ಒಳ್ಳೆಯ ಸಂದೇಶ ಇದರಲಿದೆ. ಶಫಾಲಿ ಶರ್ಮ ನಾಯಕಿಯಾಗಿ ಅಭಿನಯಿಸಿದ್ದಾರೆ. ಮೊದಲು ನಾಯಕ ಕೀರ್ತಿಕುಮಾರ್‌ ನಾಯಕ್‌ ಗೆ ತೊದಲಿಕೆ ಇತ್ತು, ಪಾತ್ರ ಮಾಡ್ತಾ ಮಾಡ್ತಾ ಅದು ಹೊರಟು ಹೋಯ್ತು ಎನ್ನುವುದೇ ವಿಶೇಷ’ ಎಂದರು.

ಪದ್ಮಾವಾಸಂತಿ, ನಾಗೇಂದ್ರ ಅರಸ್‌, ತಬಲಾನಾಣಿ, ಶೋಭರಾಜ್, ವಿಜಯಕಾಶಿ, ಸಂಹಿತಾ ವಿನ್ಯಾ ಚಿತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next