ಕೋಲಾರ: ಕನ್ನಡ ಪುಸ್ತಕಗಳನ್ನು ನೀರಿನ ಬಿಂದಿಗೆ ಮೇಲೆ ತಟ್ಟೆ ಮುಚ್ಚುವ ರೀತಿಮುಚ್ಚಿರುವ ಘಟನೆ ಪುಸ್ತಕ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಹಳೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಜಿಲ್ಲಾ ಕೇಂದ್ರದ ಡಿ.ವಿ.ಗುಂಡಪ್ಪನವರ ಗ್ರಂಥಾಲಯದಲ್ಲಿ ಈ ಘಟನೆ ನಡೆದಿದೆ.
ಸಾರ್ವಜನಿಕರು, ವಿದ್ಯಾರ್ಥಿಗಳು ಜ್ಞಾನಿಗಳಾಗಿ ಮಹನೀಯರ, ಸಾಧಕರ, ಸಾಹಿತಿಗಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಅವರ ಸಾಧನೆ ಹಾಗೂ ಅವರ ಬೆಳವಣಿಗೆಯನ್ನು ಇತರರು ಅನುಸರಿಸಲು ಮತ್ತು ಉತ್ತಮ ವಿದ್ಯಾಭ್ಯಾಸ ಮಾಡಲು ಸರಕಾರವು ಲೆಕ್ಕವಿಲ್ಲದಷ್ಟು ಅನುದಾನ ನೀಡಿ, ಊರು-ಕೇರಿ ಜಿಲ್ಲೆ ಸೇರಿದಂತೆ ಎಲ್ಲಾ ಕಡೆ ಗ್ರಂಥಾಲಯವನ್ನು ಸ್ಥಾಪನೆ ಮಾಡಿದೆ. ಕೋಲಾರ ಜಿಲ್ಲಾ ಕೇಂದ್ರದ ಡಿ.ವಿ ಗುಂಡಪ್ಪನವರ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳನ್ನು ನೀರಿನ ಬಿಂದಿಗೆ ಮೇಲೆ ತಟ್ಟೆ ಮುಚ್ಚುವ ರೀತಿ ಮುಚ್ಚಲು ಬಳಸಿರುವುದುಗ್ರಂಥಾಲಯಕ್ಕೆ ಭೇಟಿ ನೀಡಿದ ಪುಸ್ತಕ ಪ್ರೇಮಿಗಳ ಗಮನ ಸೆಳೆದಿದೆ.
ಪುಸ್ತಕ ಪ್ರೇಮಿಗಳ ಆಕ್ರೋಶ: ಕನ್ನಡ ಪುಸ್ತಕಗಳನ್ನು ಓದಲು ಬರುವ ಸಾರ್ವಜನಿಕರು ವಿದ್ಯಾರ್ಥಿಗಳು ಈ ರೀತಿಯ ದೃಶ್ಯವನ್ನುಕಂಡು ಮನಸ್ಸಿನಲ್ಲಿಯೇ ಮರುಕಪಟ್ಟಿದ್ದಾರೆ. ಗ್ರಂಥಾಲಯ ನಿರ್ವಾಹಕರಿಗೆ,ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸರ್ಕಾರ ದಿಂದ ವೇತನ ಸಹ ನೀಡಲಾಗುತ್ತದೆ.
ಆದರೆ, ಅವರ ಕಾರ್ಯವೈಖರಿ, ಕರ್ತವ್ಯದ ಜವಾಬ್ದಾರಿ ಯಾವ ರೀತಿ ಇದೆ ಎಂಬುದು ಕಣ್ಣಾರೆ ಕಂಡ ಸಾರ್ವಜನಿಕರು ಸಂಬಂಧಪಟ್ಟವರಿಗೆ ಶಾಪ ಹಾಕುತ್ತಿದ್ದು,ಕನ್ನಡ ಪುಸ್ತಕಗಳನ್ನು ಈ ರೀತಿ ಬಳಸಿರುವುದು ದ್ರೋಹ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುಸ್ತಕ ಪ್ರೇಮಿಗಳು ಒತ್ತಾಯಿಸಿದ್ದಾರೆ.