ದಾವಣಗೆರೆ: ವೈದ್ಯಕೀಯ, ತಾಂತ್ರಿಕ ವಿದ್ಯಾಲಯಗಳಲ್ಲಿನ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಅಭಿಯಾನ ಆಯೋಜಿಸುವಂತೆಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು. ಜಿಲ್ಲೆಯಲ್ಲಿ ತಾಂತ್ರಿಕ,ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಬೇರೆ ಬೇರೆರಾಜ್ಯಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿಹೋಗುವಷ್ಟರೊಳಗೆ ಒಬ್ಬೊಬ್ಬ ವಿದ್ಯಾರ್ಥಿಯನ್ನುಕನ್ನಡ ಕಲಿಸುವ ಸಲುವಾಗಿ ದತ್ತು ತೆಗೆದುಕೊಂಡುಕನ್ನಡ ಕಲಿಸುವ ಅಭಿಯಾನವನ್ನು ಜಿಲ್ಲಾ ಜಾಗೃತಿಸಮಿತಿ ಸದಸ್ಯರು ಕೈಗೊಳ್ಳಬೇಕು. ಆಗ ಅದೊಂದುವಿಶಿಷ್ಟ ಕಾರ್ಯಕ್ರಮವಾಗಲಿದೆ ಎಂದರು.
ಸಮಿತಿ ಸದಸ್ಯ ಎನ್.ಟಿ. ಎರ್ರಿಸ್ವಾಮಿಮಾತನಾಡಿ, ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಬಳಕೆಸಂಪೂರ್ಣವಾಗಿ ಆಗಬೇಕು. ಜನವರಿಯಲ್ಲಿ ಶುದ್ಧಕನ್ನಡ ಫಲಕ ಬಳಕೆ ಅಭಿಯಾನ ಕೈಗೊಂಡಿದ್ದು ರೈಲ್ವೆ, ನಗರಪಾಲಿಕೆ, ಅಂಚೆ ಕಚೇರಿ ಇತರೆಡೆ ಕನ್ನಡ ಭಾಷೆನಾಮಫಲಕ ಮತ್ತು ಕನ್ನಡ ಭಾಷೆ ಬಳಕೆ ಕುರಿತುಮನವರಿಕೆ ಮಾಡಲಾಗುತ್ತಿದೆ. ಫೆಬ್ರವರಿಯಲ್ಲಿನ್ಯಾಯಾಲಯದಲ್ಲಿ ಕನ್ನಡ ಬಳಕೆ ಅಭಿಯಾನಆರಂಭಿಸಲಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವಕೆಲಸದ ಜೊತೆಗೆ ಕನ್ನಡ ಸುಗಮ ಸಂಗೀತ, ಜಾನಪದ,ಹಳೆಯ ಚಲನಚಿತ್ರ ಗೀತೆಗಳನ್ನು ವಿವಿಧೆಡೆ ಪ್ರಸ್ತುತಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ|ಎಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ,ಸುಗಮ ಸಂಗೀತ, ಜಾನಪದ, ಚಲನಚಿತ್ರ ಗೀತೆಗಳ ಕಾರ್ಯಕ್ರಮಕ್ಕಾಗಿಯೇ ನಗರ ಪಾಲಿಕೆ ಆವರಣದಲ್ಲಿ ಪುಟ್ಟಣ್ಣ ಕಣಗಲ್ ರಂಗಮಂಟಪ ನಿರ್ಮಿಸಲಾಗಿದೆ.ಆದರೆ, ಕಳೆದ 7 ರಿಂದ 8 ವರ್ಷಗಳಿಂದ ಕಾರ್ಯಕ್ರಮನಡೆಯುತ್ತಿಲ್ಲ. ಮತ್ತೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.
ಸದಸ್ಯರಾದ ಸತ್ಯಭಾಮಾ ಮತ್ತು ದೇವಿಕಾಸುನೀಲ್ ಮಾತನಾಡಿ, ಸ್ಥಳೀಯ ಕಲಾವಿದರಿಗೆಆದ್ಯತೆ ನೀಡಿ ಸಂಗೀತ ಕಾರ್ಯಕ್ರಮ ನಡೆಸಬೇಕು.ಖಾಸಗಿ ಮತ್ತು ಸರ್ಕಾರಿ ಕಚೇರಿ ಫಲಕಗಳಲ್ಲಿ ಮೊದಲಿಗೆ ಕನ್ನಡ ನಂತರ ಆಂಗ್ಲ ಭಾಷೆ ° ಬಳಸಬೇಕು ಎಂದು ಸಲಹೆ ನೀಡಿದರು.
ಕೊರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಾರ್ವಜನಿಕವಾಗಿಹೆಚ್ಚು ಜನರನ್ನು ಸೇರಿಸಿ ಕನ್ನಡ ಸಂಗೀತ ಕಾರ್ಯಕ್ರಮಆಯೋಜನೆ ಬೇಡ. ವಾಯುವಿಹಾರಕ್ಕೆ ಬರುವಉದ್ಯಾನವನಗಳನ್ನು ಗುರುತಿಸಿ ತಿಂಗಳಲ್ಲಿ ವಿವಿಧೆಡೆ 2-3 ಕಾರ್ಯಕ್ರಮಗಳನ್ನು ಸಂಜೆ 6 ರಿಂದ 7 ಗಂಟೆಸುಮಾರು ಒಂದು ಗಂಟೆ ಕಾಲ ಸುಗಮ, ಜಾನಪದ ಮತ್ತು ಹಳೆಯ ಕನ್ನಡ ಚಲನಚಿತ್ರಗೀತೆಗಳನ್ನುಪ್ರಸ್ತುತಪಡಿಸಲು ಕಲಾವಿದರಿಗೆ ವೇದಿಕೆ ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಸಮಿತಿ ಸದಸ್ಯರಾದ ಸಿದ್ದರಾಜು, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ವಾರ್ತಾಧಿಕಾರಿ ಡಿ. ಅಶೋಕ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು.