Advertisement

ಕನ್ನಡ ಸಂಘ ಟೊರೊಂಟೊ: ಪ್ರತಿಭಾ ಸ್ಪರ್ಧೆ 2021

04:49 PM Mar 08, 2021 | Adarsha |

ಟೊರೊಂಟೊ:ಕನ್ನಡ ಸಂಘ ಟೊರೊಂಟೊ ವಾರ್ಷಿಕ ಸಾಂಸ್ಕೃತಿಕ ದಿನ ಮತ್ತು ಸ್ಪರ್ಧೆಗಳನ್ನು ಫೆ. 20ರಂದು ಜೂಮ್‌ ಆನ್‌ಲೈನ್‌ನಲ್ಲಿ ಏರ್ಪಡಿಸಲಾಗಿತ್ತು.

Advertisement

ಮೂರು ವರ್ಷದ ಪುಟ್ಟ ಮಕ್ಕಳಿಂದ 60 ವರ್ಷಕ್ಕೂ ಮೇಲ್ಪಟ್ಟ ಹಿರಿಯರು ಸೇರಿದಂತೆ ಸುಮಾರು 70 ಮಂದಿ ಪಾಲ್ಗೊಂಡು ವ್ಯವಿಧ್ಯಮಯ ಪ್ರದರ್ಶನಗಳನ್ನು ನೀಡಿದರು. ಆನ್‌ಲೈನ್‌ ಪ್ರದರ್ಶನವಾಗಿದ್ದರಿಂದ ಟೊರೊಂಟೋ ನಗರ ಮಾತ್ರವಲ್ಲದೆ ಕೆನಡಾ ಬೇರೆ ಊರುಗಳಿಂದಲೂ ಸ್ಪರ್ಧಾಳುಗಳು ಭಾಗವಹಿಸಿದ್ದು ಈ ಬಾರಿಯ ವಿಶೇಷ. ಸಂಘದ ಸದಸ್ಯರು ಹಾಡು, ನೃತ್ಯ, ಭಾಷಣ, ಛದ್ಮವೇಷ, ಏಕ ಪಾತ್ರಾಭಿನಯ, ಕಿರು ನಾಟಕ ಮೊದಲಾದವುಗಳನ್ನು ಪ್ರಸ್ತುತ ಪಡಿಸಿದರು.

ಪ್ರಾರಂಭದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ನಾಗೇಂದ್ರ ಕೃಷ್ಣಮೂರ್ತಿ ಅವರು ಸ್ವಾಗತಿಸಿ, ಸಾಂಸ್ಕೃತಿಕ ದಿನದ ನೇರ ಪ್ರಸಾರದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಂಘದ ಎಣಿಕೆಗಿಂತ ಹೆಚ್ಚು ಪ್ರತಿಕ್ರಿಯೆ ಬಂದಿರುವುದು ಸಂತಸದ ವಿಚಾರ ಎಂದರು.

ವೈಜಯಂತಿ ಚಂರ್ದೆ, ವಿನಾಯಕ್‌ ಹೆಗಡೆ, ರಸಿಕ ಜೋಗ್‌ ಮತ್ತು ಸುಶ್ಮಿತಾ ಪಾರ್ಥಸಾರಥಿ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಶುಭದಾ ಶಾಂತಗಿರಿ ಮತ್ತು ವರ್ಷಾ ಚೇತನ್‌ ವಿಭಿನ್ನ ಶೈಲಿಯಲ್ಲಿ ಅಂದರೆ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಭಾಷಾ ಸೊಗಡನ್ನು ಬಿಂಬಿಸುವ ಮಾದರಿಯಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ಒದಗಿಸಿದರು.
ಕನ್ನಡ ಸಂಘದ ಯುವ ಸಮಿತಿಯ ಸದಸ್ಯರು ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೊನೆಯಲ್ಲಿ ಕನ್ನಡ ಸಂಘದ ಕಾರ್ಯದರ್ಶಿಗಳಾದ ಚೇತನ್‌ ಭಾರದ್ವಾಜ್‌ ವಂದಿಸಿದರು.

Advertisement

ಪ್ರತಿಭಾ ಸ್ಪರ್ಧೆಯ ವಿಜೇತರು

ಛದ್ಮವೇಷ ಸ್ಪರ್ಧೆಯಲ್ಲಿ ನಿಯಾಂತ್‌ ಶರ್ಮಾ ಪ್ರಥಮ, ಅಚಿಂತ್ಯ ಅಭಿರಾಮ…, ಸೆ¾àರಾ ಪಾಟ್ನಾ ದ್ವಿತೀಯ, ಸಾಚಿ ಪಾಟ್ನಾ ತೃತೀಯ ಸ್ಥಾನ ಗಳಿಸಿದ್ದು, ಆರಭಿ ಚೇತನ್‌, ಪ್ರಣವಿ ಸುರೇಶ, ಸಾಚಿ ಕೌಶಿಕ್‌ ಪ್ರೋತ್ಸಾಹಕರ ಬಹುಮಾನ ಗೆದ್ದುಕೊಂಡಿದ್ದಾರೆ.

ಹಾಡುಗಾರಿಕೆ ಕಿರಿಯರ ವಿಭಾಗದಲ್ಲಿ ಪಾವನಿ ಸಂಗಪಲ್ಲರ್‌ ಪ್ರಥಮ, ಶ್ರುತಿ ಸುಬ್ರಹ್ಮಣ್ಯ ದ್ವಿತೀಯ, ಸಂಭ್ರಮ ಸವದತ್ತಿಮಠ ತೃತೀಯ, ವಾದ್ಯ ಸಂಗೀತದಲ್ಲಿ ನಿಧಿ ಹೆಗ್ಡೆ ಪ್ರಥಮ, ಅರ್ಜುನ್‌ ಧನಶೇಖರನ್‌ ದ್ವಿತೀಯ, ಯುಕ್ತ ಆರ್‌. ರಾವ್‌ ತೃತೀಯ, ನೃತ್ಯ ಸ್ಪರ್ಧೆಯಲ್ಲಿ ಗೌರಿ ಮೂರ್ತಿ ಪ್ರಥಮ, ಪೂರ್ಣವಿ ಪ್ರವೀಣ್‌ ಕುಮಾರ್‌ ದ್ವಿತೀಯ, ಸಿಯಾ ಶ್ರೀನಿವಾಸ್‌ ತೃತೀಯ ಸ್ಥಾನ ಗಳಿಸಿದರು. ಇತರ ಪ್ರತಿಭಾ ಪ್ರದರ್ಶನದಲ್ಲಿ ಅನಘÂì ಅಭಿರಾಮ್‌ ಪ್ರಥಮ, ಸೂರ್ಯ ಹೆಗ್ಡೆ ದ್ವಿತೀಯ, ಚಿನ್ಮಯ ಅತ್ರೇಯ, ಸಾಕೇತ್‌ ಗೋವಿಂದ ಶೆಲ್ಲಿಕೇರಿ ತೃತೀಯ ಬಹುಮಾನ ಗಳಿಸಿದರು.

ಯುವಕ, ಯುವತಿಯರ ವಿಭಾಗದ ಹಾಡುಗಾರಿಕೆಯಲ್ಲಿ ನಿಧಿ ಸುಬ್ರಹ್ಮಣ್ಯ ಪ್ರಥಮ, ಶ್ರೇಯಾ ಪ್ರಸನ್ನ ದ್ವಿತೀಯ, ಧೃತಿ ಶಾಂತಗಿರಿ ತೃತೀಯ, ವಾದ್ಯ ಸಂಗೀತದಲ್ಲಿ ಚಿನ್ಮಯಿ ಗನ್ನಮರಾಜು ಪ್ರಥಮ, ನಿಧಿ ಸುಬ್ರಹ್ಮಣ್ಯ ದ್ವಿತೀಯ, ಅನಿರು¨œ… ಭಾರದ್ವಾಜ್‌ ತೃತೀಯ, ನೃತ್ಯ ಸ್ಪರ್ಧೆಯಲ್ಲಿ ಧೃತಿ ಶಾಂತಗಿರಿ ಪ್ರಥಮ, ತೀರ್ಪುಗಾರರ ವಿಶೇಷ ಪುರಸ್ಕಾರ ಅಭಿಜ್ಞಾ ಚೇತನ್‌, ಪೂರ್ಣವಿ ಪ್ರವೀಣ್‌ ಕುಮಾರ್‌, ಶ್ರೀಜನ್ಯ ಶರ್ಮಾ ಗಳಿಸಿದರು.
ಭಾಷಣ ಸ್ಪರ್ಧೆಯಲ್ಲಿ ಕಾವ್ಯ ಹೆಗ್ಡೆ ಪ್ರಥಮ, ಪೂರ್ವಿ ಪ್ರಶಾಂತ್‌ ದ್ವಿತೀಯ, ನವ್ಯ ಪಾಟೀಲ್‌ ತೃತೀಯ ಸ್ಥಾನಗಳಿಸಿದ್ದು, ಇತರ ಪ್ರತಿಭಾ ಪ್ರದರ್ಶನದಲ್ಲಿ ಅರ್ಯ ಶಂಕರ್‌, ಪ್ರಣವ್‌ ಪ್ರವೀಣ್‌ ಕುಮಾರ್‌, ಕ್ಷಿತಿಜ್‌ ಬಹುಮಾನಗಳಿಸಿದರು.

ವಯಸ್ಕರ ವಿಭಾಗದ ಹಾಡುಗಾರಿಕೆಯಲ್ಲಿ ಪವನ್‌ ರಾವ್‌ ಪ್ರಥಮ, ಅಕ್ಷತಾ ಶರಣ್‌ ದ್ವಿತೀಯ, ಪ್ರಶಾಂತ್‌ ಸುಬ್ಬಣ್ಣ ತೃತೀಯ, ವಾದ್ಯ ಸಂಗೀತದಲ್ಲಿ ಮಂಜುನಾಥ್‌ ಕೊಪ್ಪದ ಪ್ರಥಮ, ಹಿರಿಯರ ವಿಭಾಗದ ಪ್ರತಿಭಾ ಪ್ರದರ್ಶನದಲ್ಲಿ ಅಶಾ ಚಂದ್ರು ಪಾಟ್ನಾ, ಚಂದ್ರಪ್ಪ ಪಾಟ್ನಾ ಪ್ರಥಮ, ಸರ್ವೋತ್ತಮ ಮೆಣಸಿ ನಕಾಯಿ ದ್ವಿತೀಯ ಸ್ಥಾನಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next