Advertisement
ಅಡೆತಡೆ, ಗಾಯ, ಧೂಳು, ಹೀಗೆ ನೂರಾರು ಸವಾಲುಗಳ ಮೆಟ್ಟಿ ಸಾಧನೆಯ ಶಿಖರವೇರಿದ ಬೆಂಗಳೂರಿನ ಹುಡುಗಿ ಇದೀಗ ಹಂಗೇರಿ¿ದಲ್ಲಿ ವಿಶ್ವಕಪ್ ಬೈಕ್ ರೇಸ್ ಗೆದ್ದಿದ್ದಾರೆ. 23 ವರ್ಷದ ಐಶ್ವರ್ಯಾ ಪಿಸ್ಸೆ ಎಫ್ಐಎಂ ವಿಶ್ವಕಪ್ ಮಹಿಳಾ ಬೈಕ್ ರೇಸ್‌ನ ಕೊನೆಯ ಸುತ್ತಿನಲ್ಲೂ ಮಿಂಚಿದರು. ಒಟ್ಟಾರೆ 4 ಸುತ್ತಿನ ರೇಸ್‌ನಲ್ಲಿ ಒಟ್ಟು 3,200 ಕಿ.ಮೀ. ಕ್ರಮಿಸಿ, 65 ಅಂಕ ಪಡೆದು ಕೂಟದ ಚಾಂಪಿಯನ್ ಎನಿಸಿಕೊಂಡರು. ಪೋರ್ಚುಗಲ್‌ನ ರೀಟಾ ವಿಯೆರಾ 61 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡರು.
ಒಟ್ಟಾರೆ 4 ಸುತ್ತಿನ ವಿಶ್ವಕಪ್ ರೇಸ್ ಇದಾಗಿತ್ತು. ಮೊದಲ ಸುತ್ತು ದುಬಾೖಯಲ್ಲಿ ನಡೆದಿತ್ತು. ಅಲ್ಲಿ ಐಶ್ವರ್ಯಾ ಮೊದಲ ಸ್ಥಾನ ಪಡೆದಿದ್ದರು. 2ನೇ ಸುತ್ತು ಪೂರ್ಚುಗಲ್‌ನಲ್ಲಿ ಸಾಗಿತ್ತು. ಅಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದರು. ಸ್ಪೇನ್‌ನಲ್ಲಿ ನಡೆದ 3ನೇ ಸುತ್ತಿನ ರೇಸ್‌ನಲ್ಲೂ ಐಶ್ವರ್ಯಾ ಮಿಂಚಿ 3ನೇ ಸ್ಥಾನ ಪಡೆದಿದ್ದರು. ಇದೀಗ ಹಂಗೇರಿಯಾದಲ್ಲಿ ನಾಲ್ಕನೇ ಸ್ಥಾನ ಪಡೆದು ಒಟ್ಟಾರೆ 65 ಅಂಕವನ್ನು ಪಡೆದುಕೊಂಡು ಐತಿಹಾಸಿಕ ಸಾಧನೆಗೈದರು. 250 ಸಿಸಿ ಬೈಕ್ ಬಳಕೆ
ಐಶ್ವರ್ಯಾ ಸಾಧನೆ ನಿಜಕ್ಕೂ ಶ್ಲಾಘನಾರ್ಹ. ಏಕೆಂದರೆ ಅವರು ಕೇವಲ 250 ಸಿಸಿ ಬೈಕ್‌ನಿಂದ ಇಷ್ಟು ದೊಡ್ಡ ಸಾಧನೆ ಮೆರೆದಿದ್ದಾರೆ. ಬೇರೆ ದೇಶದ ಸ್ಪರ್ಧಿಗಳು 450 ಸಿಸಿ ಬೈಕ್ ಹೊಂದಿದ್ದರು. ಹೀಗಾಗಿ ಐಶ್ವರ್ಯಾಗೆ ಅವರಿಂದ ಕಠಿನ ಸ್ಪರ್ಧೆ ಎದುರಾಯಿತು. ಜತೆಗೆ ಒಂದು ಹಂತದಲ್ಲಿ ಐಶ್ವರ್ಯಾ ಸ್ಪರ್ಧೆ ನಿಯಮ ಉಲ್ಲಂ ಸಿದ್ದಕ್ಕೆ ದಂಡಕ್ಕೂ ತುತ್ತಾಗಿದ್ದರು.