Advertisement

ನಟಿ ರಶ್ಮಿಕಾ ಹೊಸ ಮನೆ ಖರೀದಿಸಿದ್ದಕ್ಕೆ ಹೊಟ್ಟೆಕಿಚ್ಚು ಪಟ್ಟಿದ್ದು ಯಾರು ?

03:29 PM Oct 02, 2021 | Team Udayavani |

ಹೈದರಾಬಾದ್: ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಬ್ಯುಝಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಕಳೆದ ಕೆಲ ತಿಂಗಳುಗಳ ಹಿಂದೆ ಹೊಸ ಕಾರು ಹಾಗೂ ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಇದೀಗ ಗೋವಾದಲ್ಲೂ ಹೊಸ ಮನೆ ಖರೀದಿಸಿದ್ದಾರಂತೆ ಕೊಡಗಿನ ಬೆಡಗಿ.

Advertisement

ತಾವು ಗೋವಾದಲ್ಲಿ ಮನೆ ಕೊಂಡುಕೊಂಡಿದ್ದರ  ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಶ್ಮಿಕಾ.  ಪ್ರಕೃತಿ ಸೌಂದರ್ಯದ ನಡುವೆ ಈ ಮನೆ ಇದೆ. ಈಜುಕೊಳದ ಪಕ್ಕದಲ್ಲೇ ಬುದ್ಧನ ಮೂರ್ತಿ ಇದೆ. ಸದಾ ನೆರಳು ನೀಡಲು ಬೃಹದಾದ ಮರವಿದೆ. ಇದನ್ನೆಲ್ಲ ನೋಡಿದರೆ ಬೇರೆ ನಟಿಯರಿಗೆ ಹೊಟ್ಟೆಕಿಚ್ಚಾದರೂ ಅಚ್ಚರಿ ಏನಿಲ್ಲ. ಅದಕ್ಕೆ ರಶ್ಮಿಕಾ ನೀಡಿದ ಕ್ಯಾಪ್ಷನ್​ ಕೂಡ ಗಮನ ಸೆಳೆಯುತ್ತಿದೆ. ‘ಗೋವಾದಲ್ಲಿ ಹೊಸ ಮನೆ ಖರೀದಿಸಿದಾಗ… ಹೊಟ್ಟೆಕಿಚ್ಚು ಆಯ್ತಾ?’ ಎಂದು ರಶ್ಮಿಕಾ ಪ್ರಶ್ನಿಸಿದ್ದಾರೆ. ಆದರೆ ಅವರು ಹೀಗೆ ಟಾಂಗ್​ ನೀಡಿರುವುದು ಯಾರಿಗೆ ಎಂಬುದು ಗೊತ್ತಾಗಿಲ್ಲ.

ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವಕಾಶಗಳ ಮಹಾಸಾಗರವೇ ಈ ನಟಿಯತ್ತ ಹರಿದು ಬರುತ್ತಿದೆ. ಟಾಲಿವುಡ್ ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾದ ರಶ್ಮಿಕಾ ಅವರು ಪರಭಾಷೆಗಳ ಸಿನಿಮಾಗಳಲ್ಲೂ ಸಖತ್ ಮಿಂಚುತ್ತಿದ್ದಾರೆ. ಬಾಲಿವುಡ್​ನಲ್ಲಿ ಅವರು ‘ಮಿಷನ್​ ಮಜ್ನು’ ಸಿನಿಮಾ ಶೂಟಿಂಗ್​ ಮುಗಿಸಿದ್ದಾರೆ. ‘ಗುಡ್​ಬೈ’ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ ಜೊತೆ ನಟಿಸುತ್ತಿದ್ದಾರೆ. ಇವರು ನಟಿಸಿರುವ ಟಾಲಿವುಡ್‍ನ ಪುಷ್ಪ ಸಿನಿಮಾ ಡಿಸೆಂಬರ್ 17ಕ್ಕೆ ರಿಲೀಸ್ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next