Advertisement

ಅಧ್ಯಕ್ಷ ಶರಣ್ ಜೊತೆ ಅಮೆರಿಕಾ ಸೇರಿಕೊಂಡರು ರಾಗಿಣಿ!

09:40 AM Oct 02, 2019 | Team Udayavani |

ನಟಿ ರಾಗಿಣಿ ಈ ಹಿಂದೆ ಹಾಡಿಗೆ ಕುಣಿಯೋ ಮೂಲಕವಷ್ಟೇ ಶರಣ್ ಅವರಿಗೆ ಜೊತೆಯಾಗಿದ್ದರು. ಆ ಹಾಡಿನಲ್ಲಿ ಈ ಜೋಡಿಯನ್ನು ಕಂಡಿದ್ದ ಅನೇಕರು ಇವರಿಬ್ಬರು ಒಟ್ಟಾಗಿ ಒಂದು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆಯೆಂಬ ಇಂಗಿತವನ್ನೂ ಹೊಂದಿದ್ದರು. ಅದೀಗ ಹಲವಾರು ವರ್ಷಗಳ ನಂತರ ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ಮೂಲಕ ಸಾಕಾರಗೊಂಡಿದೆ.

Advertisement

ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರದ ಮೂಲಕ ಮೊದಲ ಸಲ ಶರಣ್ ಮತ್ತು ರಾಗಿಣಿ ಜೋಡಿಯಾಗಿ ನಟಿಸಿದ್ದಾರೆ. ಯೋಗಾನಂದ್ ಮುದ್ದಾನ್ ನಿರ್ದೇಶನ ಮಾಡಿರೋ ಈ ಸಿನಿಮಾದಲ್ಲಿ ರಾಗಿಣಿಗೆ ಅತ್ಯಂತ ಅಪರೂಪದ ಪಾತ್ರವೇ ಸಿಕ್ಕಿದೆ. ಇದುವರೆಗೂ ರಾಗಿಣಿ ಥರ ಥರದ ಪಾತ್ರ ಮಾಡಿರೋ ರಾಗಿಣಿ ಪಕ್ಕಾ ಮಾಸ್ ಪಾತ್ರಗಳಲ್ಲಿಯೂ ಮಿಂಚಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳಲ್ಲಿ ನಟಿಸೋ ಮೂಲಕವೂ ಸೈ ಅನ್ನಿಸಿಕೊಂಡಿದ್ದಾರೆ. ಆದರೆ ಅಧ್ಯಕ್ಷ ಇನ್ ಅಮೆರಿಕಾದಂಥಾ ಪಾತ್ರವನ್ನು ಮಾತ್ರ ಅವರು ಈ ಹಿಂದೆಂದೂ ಮಾಡಿರಲಿಲ್ಲವಂತೆ.

ಶರಣ್ ಕಾಮಿಡಿ ಪ್ರಧಾನ ಪಾತ್ರಗಳನ್ನು ಮಾಡಿದರೂ ಕೂಡಾ ಅವರ ಈ ವರೆಗಿನ ಸಿನಿಮಾಗಳಲ್ಲಿ ನಾಯಕಿಯರ ಪಾತ್ರ ಬೇರೆ ಜಾಡಿನದ್ದಾಗಿರುತ್ತಿತ್ತು. ಆದರೆ ಈ ಸಿನಿಮಾದಲ್ಲಿ ನಾಯಕಿಯೂ ಶರಣ್‌ ಗೆ ಕಾಮಿಡಿಯಲ್ಲಿ ಸಾಥ್ ಕೊಡಲಿದ್ದಾರೆ. ರಾಗಿಣಿ ಕೂಡಾ ನಗೆಯುಕ್ಕಿಸುವಂಥಾ ಸನ್ನಿವೇಶಗಳಲ್ಲಿ ನಟಿಸಿದ್ದಾರಂತೆ. ಈ ಪಾತ್ರಕ್ಕಾಗಿ ಅವರು ಅದೆಷ್ಟೋ ಕಾಲ ರಿಹರ್ಸಲ್ ನಡೆಸಿ, ಧೈರ್ಯ ತುಂಬಿಕೊಂಡು ಅಣಿಗೊಳ್ಳುತ್ತಲೇ ನಿರ್ವಹಿಸಿದ್ದಾರಂತೆ. ಅದಕ್ಕೆ ಚಿತ್ರ ತಂಡದ ಕಡೆಯಿಂದ ಸಿಕ್ಕ ಪ್ರತಿಕ್ರಿಯೆಗಳೇ ಅವರಲ್ಲಿ ಧೈರ್ಯ ತುಂಬಿವೆ. ಅದೇ ರೀತಿ ತಮ್ಮ ಪಾತ್ರ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಅವರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next