Advertisement

‘ಜೊತೆ ಜೊತೆಯಲಿ’ ಧಾರವಾಹಿಯಿಂದ ಹೊರ ಬಂದ ಮೇಘಾ ಶೆಟ್ಟಿ

01:12 PM Jul 10, 2021 | Team Udayavani |

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಿಂದ ನಾಯಕಿ ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತಿದ್ದ ಮೇಘಾ ಶೆಟ್ಟಿ ಹೊರಬಂದಿದ್ದಾರೆ.

Advertisement

ಮೇಘಾ ಈಗಾಗಲೇ ತಮ್ಮ ಕೊನೆಯ ದಿನದ ಶೂಟಿಂಗ್ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಧಾರವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಳ್ಳಲ್ಲ ಎನ್ನಲಾಗಿದೆ. ಹೀಗಾಗಿ ಅನು ಸಿರಿಮನೆ ಪಾತ್ರಕ್ಕೆ ಬೇರೊಬ್ಬ ನಟಿ ಬರುವುದು ಪಕ್ಕಾ ಆಗಿದೆ. ಆದರೆ ಮೇಘಾ ಹೊರಹೋಗುತ್ತಿರುವ ಸುದ್ದಿ ತಿಳಿದು ಅವರ ಅಭಿಮಾನಿ ವರ್ಗ ತೀವ್ರ ಬೇಸರ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಮೇಘಾನೇ ಅನು ಸಿರಿಮನೆಯಾಗಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ. ಸೀರಿಯಲ್ ಬಿಡಲು ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ಸ್ವತಃ ಮೇಘಾ ಇನ್ನೂ ಸ್ಪಷ್ಟನೆ ಅಥವಾ ಯಾವುದೇ ಹೇಳಿಕೆ ಕೊಟ್ಟಿಲ್ಲ. ಇನ್ನೂ ಕೆಲ ದಿನಗಳ ಕಾಲ ಮೇಘಾ ಶೆಟ್ಟಿ ನಟನೆಯ ಎಪಿಸೋಡ್ ಗಳು ಪ್ರಸಾರವಾಗಲಿದೆ. ತಿಂಗಳ ಅಂತ್ಯದಲ್ಲಿ ಅನು ಸಿರಿಮನೆ ಪಾತ್ರಕ್ಕೆ ಹೊಸ ನಾಯಕಿಯ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next