Advertisement
ಚಂದನವನದಲ್ಲಿ ನೂರು ಸಿನಿಮಾಗಳನ್ನು ಪೂರೈಸಿ 125 ನೇ ಚಿತ್ರಕ್ಕೆ ಶಿವಣ್ಣ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ ಹೊಸ ಸಿನಿಮಾ ಬಗ್ಗೆ ಕೌತುಕದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಸಿಹಿ ಸುದ್ದಿ ನೀಡಿದ್ದಾರೆ.
Related Articles
Advertisement
ಇನ್ನು ಶಿವರಾಜ್ ಕುಮಾರ್ ಅವರ 125 ಸಿನಿಮಾ ಶೀರ್ಷಿಕೆ ‘ವೇದ’ ಎಂದು ಇಡಲಾಗಿದೆ. ಭಜರಂಗಿ ಸಿನಿಮಾ ಖ್ಯಾತಿಯ ಎ ಹರ್ಷ ‘ವೇದ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.
ಖಡಕ್ ಲುಕ್ :
ಇಂದು ರಿಲೀಸ್ ಆಗಿರುವ ‘ವೇದ’ ಚಿತ್ರದ ಲುಕ್ ಖಡಕ್ ಆಗಿದೆ. ಮುಖದ ಮೇಲೆ ಬಿಳಿ ಗಡ್ಡ ಹೊತ್ತು ಕಾಣಿಸಿಕೊಂಡಿರುವ ಶಿವಣ್ಣನ ಖದರ್ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದೆ. ‘ವೇದ’ನ ಲುಕ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಕಥೆ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲವಾದರೂ, ಇದು 1960’ರ ಬ್ಯಾಕ್‍ಡ್ರಾಪ್ ಕಥೆ ಹೊಂದಿದೆ ಎನ್ನುವುದು ಸಿನಿಮಾ ಫಸ್ಟ್ ಲುಕ್‍ನಲ್ಲಿ ಚಿತ್ರತಂಡ ಸುಳಿವು ನೀಡಿದೆ.
ಇನ್ನು ಶೀಘ್ರದಲ್ಲೇ ಶಿವರಾಜ್ ಕುಮಾರ್ ಅವರು ‘ಭಜರಂಗಿ 2’ ಸಿನಿಮಾ ತೆರೆ ಮೇಲೆ ಬರಲಿದೆ. ಈ ಚಿತ್ರಕ್ಕೂ ಎ ಹರ್ಷ ಅವರ ನಿರ್ದೇಶನ ಇದೆ.