Advertisement

ಉಳಿದವರು ಕಾಣದ ‘ರಿಚರ್ಡ್ ಆಂಟನಿ’ಗೆ ಸಿಂಪಲ್ ಸ್ಟಾರ್ ರಕ್ಷಿತ್ ಆಕ್ಷನ್ ಕಟ್

01:44 PM Jul 11, 2021 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಸಿನಿಮಾ ನಿರ್ದೇಶನಕ್ಕೆ ರೆಡಿಯಾಗಿದ್ದು, ಇಂದು (ಜುಲೈ 11) ಸಿನಿಮಾ ಟೈಟಲ್ ಲಾಂಚ್ ಆಗಿದೆ.

Advertisement

ಸಮುದ್ರ ದೇವನಿಗೆ ರಿಚ್ಚಿ ಆಕ್ಷನ್ ಕಟ್ :

ರಕ್ಷಿತ್ ಶೆಟ್ಟಿ ಅವರು ನಿರ್ದೇಶನ ಮಾಡಲಿರುವ ಹೊಸ ಚಿತ್ರದ ಹೆಸರು ‘ರಿಚರ್ಡ್ ಆಂಟನಿ’. ಲಾರ್ಡ್ ಆಫ್ ಸೀ ಎನ್ನುವ ಟ್ಯಾಗ್ ಲೈನ್ ಹೊಂದಿದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ ಬ್ಯಾನರ್ ನಡಿ ನಿರ್ಮಾಪಕ ವಿಜಯ್ ಕಿರಂಗದೂರು ನಿರ್ಮಿಸುತ್ತಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಿತ್, ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ. ರಿಚರ್ಡ್ ಆಂಟನಿ-ಮುಂದಿನ ಅಲೆ, ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ, ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ ಎಂದಿದ್ದಾರೆ.

ನಿಜವಾಯ್ತು ಅಭಿಮಾನಿಗಳ ನಿರೀಕ್ಷೆ :

Advertisement

ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಜನ್ಮದಿನದಂದು ನಿರ್ಮಾಪಕ ವಿಜಯ್ ಕಿರಗಂದೂರು ಹಂಚಿಕೊಂಡ ಚಿತ್ರ ಎಲ್ಲರ ಗಮನಸೆಳೆದಿತ್ತು. ಹೊಸ ಚಿತ್ರಕ್ಕೆ ಇವರೀರ್ವರು ಕೈಜೋಡಿಸಲಿದ್ದಾರೆಯೇ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಅದು ಇದೀಗ ನಿಜವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next