Advertisement

Gurunandan; ಹೊಸ ಚಿತ್ರದಲ್ಲಿ ಗುರುನಂದನ್;‌ ನಟನೆಯ ಜತೆಗೆ ನಿರ್ಮಾಣ

05:19 PM Aug 16, 2024 | Team Udayavani |

ಫ‌ಸ್ಟ್‌ ರ್‍ಯಾಂಕ್‌ ರಾಜು ಚಿತ್ರದ ಮೂಲಕ ಗಮನ ಸೆಳೆದ ನಾಯಕ ನಟ ಗುರುನಂದನ್‌ ಅವರ ಹೊಸ ಸಿನಿಮಾಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ಮೊದಲ ದೃಶ್ಯಕ್ಕೆ ಅಶ್ವಿ‌ನಿ ಪುನೀತ್‌ ರಾಜ್‌ ಕುಮಾರ್‌ ಅವರು ಕ್ಲಾéಪ್‌ ಮಾಡಿ ಶುಭ ಕೋರಿದರು.

Advertisement

ಈ ಚಿತ್ರವನ್ನು ಮಂಡಿಮನೆ ಟಾಕೀಸ್‌ ಬ್ಯಾನರ್‌ ಮೂಲಕ ಸ್ವತಃ ಗುರುನಂದನ್‌ ಅವರೇ ನಿರ್ಮಿಸುತ್ತಿದ್ದಾರೆ. ಸುಮಂತ್‌ ಗೌಡ ಚೊಚ್ಚಲ ನಿರ್ದೇಶನ ಚಿತ್ರಕ್ಕಿದ್ದು, ಭೀಮ ಖ್ಯಾತಿಯ ಶಿವಸೇನಾ ಛಾಯಾಗ್ರಹಣ, ಕಿರಣ್‌ ರವೀಂದ್ರನಾಥ್‌ ಸಂಗೀತ, ಶರತ್‌ ಚಕ್ರವರ್ತಿ ಸಂಭಾಷಣೆ ಚಿತ್ರಕ್ಕಿದೆ.

ಚಿತ್ರದ ಮುಖ್ಯಭೂಮಿಕೆಯಲ್ಲಿ ಗುರುನಂದನ್‌ ಜೊತೆಗೆ ನಾಯಕಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣ್ಣಚ್ಚ ನಾಯಕಿಯಾಗಿ ಅಭಿನಯಿಸುತ್ತಿದಾರೆ. ಉಳಿದಂತೆ ತಬಲ ನಾಣಿ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮವಾಗಬೇಕಿದೆ

Advertisement

Udayavani is now on Telegram. Click here to join our channel and stay updated with the latest news.

Next