Advertisement

ಕೋವಿಡ್ ನಿಂದಾಗಿ ಝೂಗಳಿಗೆ ಸಂಕಷ್ಟ:ಪ್ರಾಣಿ ದತ್ತು ಪಡೆಯುವಂತೆ ದರ್ಶನ್ ಕರೆ

03:48 PM Jun 05, 2021 | Team Udayavani |

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೋವಿಡ್ ಸಂಕಷ್ಟದಿಂದ ಸಂಕಷ್ಟದಲ್ಲಿರುವ ರಾಜ್ಯದ ಪ್ರಾಣಿ ಸಂಗ್ರಹಾಲಯಗಳ ನೆರವಿಗೆ ಧಾವಿಸಿದ್ದಾರೆ.

Advertisement

ಲಾಕ್ ಡೌನ್ ನಿಂದಾಗಿ ಪ್ರವಾಸಿಗರು ಇಲ್ಲದೆ ಝೂಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇದರಿಂದಾಗಿ ಪ್ರಾಣಿಗಳಿಗೆ ಆಹಾರದ ಕೊರತೆ ಎದುರಾಗಿದೆ.  ಈ ಸಮಸ್ಯೆಗೆ ಪ್ರಾಣಿ ಪ್ರಿಯ ದಚ್ಚು ಒಳ್ಳೆಯ ಪರಿಹಾರ ಹೇಳಿದ್ದಾರೆ. ಸಂಗ್ರಹಾಲಯಗಳಲ್ಲಿರುವ ಪ್ರಾಣಿಗಳನ್ನ ದತ್ತು ಪಡೆಯುವಂತೆ ಕೇಳಿಕೊಂಡಿದ್ದಾರೆ.

ಈ ಬಗ್ಗೆ ವಿಶೇಷ ವಿಡಿಯೋ ಮಾಡಿರುವ ಡಿ ಬಾಸ್​​, ಕೊವಿಡ್​ನಿಂದ ಮಾನವರಿಗೆ ತೊಂದರೆ ಆಗಿದೆ. ಅದರ ಜತೆಗೆ ಪ್ರಾಣಿ ಸಂಕುಲಕ್ಕೂ ಸಮಸ್ಯೆ ಆಗಿದೆ. ನಮ್ಮ ರಾಜ್ಯದಲ್ಲಿ 9 ಝೂಗಳು ಇವೆ. ಹೀಗಾಗಿ, ಬೇರೆ ದೇಶದಿಂದ ಎಲ್ಲರೂ ಇಲ್ಲಿಗೆ ಬರ್ತಾರೆ. ಅವರು ನೀಡುವ ಟಿಕೆಟ್​ ಹಣದಿಂದ ಝೂ ನಿರ್ವಹಣೆ ಆಗುತ್ತಿತ್ತು. ಆದರೆ, ಈಗ ಈ ಪ್ರಕ್ರಿಯೆ ನಿಂತಿದೆ. ಹೀಗಾಗಿ, ಪ್ರಾಣಿಗಳ ನಿರ್ವಹಣೆ, ಅವರನ್ನು ನೋಡಿಕೊಳ್ಳೋರಿಗೆ ಸಂಬಳ ನೀಡೋದು ಕಷ್ಟವಾಗುತ್ತಿದೆ ಎಂದಿದ್ದಾರೆ​.

ಎಲ್ಲರೂ ಮನೆಯಲ್ಲಿ ಪ್ರಾಣಿ ಸಾಕಲು ಆಗುವುದಿಲ್ಲ. ಆದರೆ, ಅದನ್ನು ನಿರ್ವಹಣೆ ಮಾಡಲು ಅವಕಾಶ ಇದೆ. ಲವ್​ಬರ್ಡ್​ಗೆ 1 ಸಾವಿರ, ಹುಲಿಗೆ 1 ಲಕ್ಷ, ಆನೆಗೆ 1.70 ಲಕ್ಷ ರೂಪಾಯಿ ನೀಡಿ ದತ್ತು ಪಡೆದರೆ ಒಂದು ವರ್ಷಗಳ ಕಾಲ ಅವುಗಳ ನಿರ್ವಹಣೆ ನಿಮ್ಮ ಹೆಸರಲ್ಲಾಗುತ್ತದೆ. ಝೂ ಆಫ್​​ ಕರ್ನಾಟಕ ಆ್ಯಪ್​ ಮೂಲಕ ಪ್ರಾಣಿಗಳನ್ನು ದತ್ತು ಪಡೆಯೋದು ಹೇಗೆ ಎಂದು ತಿಳಿದುಕೊಳ್ಳಬಹುದು. ಹತ್ತಿರದ ಝೂಗೆ ಭೇಟಿ ನೀಡಿದರೂ ಇದನ್ನು ಮಾಡೋಕೆ ಸಾಧ್ಯ. ಇದೊಂದು ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸಿ ಎಂದು ದರ್ಶನ್​ ಕರೆ ನೀಡಿದ್ದಾರೆ.

ಇನ್ನು ದರ್ಶನ್ ಅವರು ಈ ಮೊದಲಿನಿಂದಲೂ ಮೈಸೂರು ಪ್ರಾಣಿ ಸಂಗ್ರಹಾಲಯದಲ್ಲಿರುವ ಕೆಲವೊಂದು ಪ್ರಾಣಿಗಳನ್ನು ದತ್ತು ಪಡೆದು, ಅವುಗಳ ಪಾಲನೆ-ಪೋಷಣೆಗೆ ಧನ ಸಹಾಯ ಮಾಡುತ್ತ ಬಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next