Advertisement

ಚಿರು ಅಕಾಲಿಕ ಅಗಲಿಕೆ ಸಂಗಾತಿ ಮೇಘನಾ ರಾಜ್ ಗೆ ತೀವ್ರ ಶಾಕ್!

06:28 PM Jun 07, 2020 | Hari Prasad |

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಸೋದರಳಿಯ, ನಟ ಧ್ರುವ ಸರ್ಜಾ ಅವರ ಸಹೋದರ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಅಗಲುವಿಕೆ ಸ್ಯಾಂಡಲ್ ವುಡ್ ಗೆ ಅನಿರೀಕ್ಷಿತ ಶಾಕ್ ನೀಡಿದೆ.

Advertisement

ಆದರೆ ಚಿರಂಜೀವಿ ಅಗಲುವಿಕೆ ಅವರ ಪತ್ನಿ ನಟಿ, ಗಾಯಕಿ ಮೇಘನಾ ರಾಜ್ ಅವರನ್ನು ತೀವ್ರ ಆಘಾತಕ್ಕೆ ತಳ್ಳಿದೆ.

ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಚಿರಂಜೀವಿ ಸರ್ಜಾ ಅವರು ಮೇಘನಾ ಅವರನ್ನು ಮದುವೆಯಾಗಿದ್ದರು.

ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ದಂಪತಿಗಳಾಗಿರುವ ಸೌಂದರ್ಯರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮಗಳು.

ಮೇಘನಾ ರಾಜ್ ಅವರು ಚಿರಂಜೀವಿ ಅವರ ಹೊಸ ಚಿತ್ರ ‘ಸಿಂಗಂ’ದಲ್ಲಿ ಜಬರ್ದಸ್ತ್ ಹಾಡೊಂದನ್ನೂ ಸಹ ಹಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next