ನರಗುಂದ: ಕನ್ನಡ ಕೇವಲ ಅಕ್ಷರಗಳ ಸರಮಾಲೆಯಲ್ಲ. ಅದು ನಮ್ಮ ಬದುಕು. ಅಂತಹ ಪರಿಕಲ್ಪನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡದ ತೇರು ಎಳೆಯಲು ಸಮಸ್ತ ಕನ್ನಡಿಗರು ಕೈಜೋಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅವರುಏರ್ಪಡಿಸಿದ್ದ ಕೃತಜ್ಞತೆ ಸಮರ್ಪಣಾ ಸಭೆಯಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಗೆದ್ದರೂ ಖುಷಿಪಡುವಸ್ಥಿತಿಯಿಲ್ಲ. ನಮ್ಮೆದುರು ಅನೇಕ ಸವಾಲುಗಳಿವೆ. ಸಮರ್ಥ ಹಾದಿಗೆ ನಾವೆಲ್ಲ ಸೇರಿ ಶ್ರಮಿಸಬೇಕು. ಅಂದಾಗ ಗುರಿ ತಲುಪಲು ಸಾಧ್ಯ ಎಂದರು.ಕನ್ನಡ ತಾಯಿ ಸೇವೆ ಮಾಡಲು ಅವಕಾಶಮಾಡಿಕೊಟ್ಟ ಕಸಾಪದ ಎಲ್ಲ ಆಜೀವಸದಸ್ಯರಿಗೆ, ಸಾರ್ವಜನಿಕರಿಗೆ ಕೃತಜ್ಞತೆಸಲ್ಲಿಸುತ್ತೇನೆ ಎಂದು ವಿವೇಕಾನಂದಗೌಡ ಪಾಟೀಲಹೇಳಿದರು.
ಕೆ.ಎಚ್.ಬೇಲೂರ ಅವರು ಮಾತನಾಡಿ, 5ವರ್ಷಗಳ ಅವಧಿ ಯಲ್ಲಿ ವಿವೇಕಾನಂದಗೌಡರು ದಾಖಲೆ ರೀತಿಯಲ್ಲಿ ಕನ್ನಡದ ಸೇವೆ ಮಾಡುವ ವಿಶ್ವಾಸವಿದೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷೆ ಮಂಗಳಾ ಪಾಟೀಲ, ಚನ್ನಬಸಪ್ಪ ಕಂಠಿ, ಡಾ.ಶಿವಪ್ಪ ಕುರಿಮಾತನಾಡಿಡದರು. ಸಿ.ಎಚ್.ಕೋರಿ ಅಧ್ಯಕ್ಷತೆವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಬಳಗದಿಂದ ವಿವೇಕಾನಂದಗೌಡ ಪಾಟೀಲ ಅವರನ್ನು ಸತ್ಕರಿಸಲಾಯಿತು.
ವೇದಿಕೆಯಲ್ಲಿ ಸಿಕೆಎಚ್ ಕಡಣಿ ಶಾಸ್ತ್ರಿಗಳು, ವಿ.ಎನ್.ಕೊಳ್ಳಿಯವರ, ಡಾ.ವಿ.ಎಸ್.ಹಿರೇಮಠ, ಶಿವಪ್ಪ ಬೋಳಶೆಟ್ಟಿ, ರಮೇಶಗೌಡ ಕರಕನಗೌಡ್ರ, ಶಂಕ್ರಣ್ಣ ವಾಳದ, ಅಂದಾನಯ್ಯ ಹಿರೇಮಠ, ಎಂ.ಎಂ.ಕಲಹಾಳ, ಕಿಶೋರಬಾಬು ನಾಗರಕಟ್ಟೆ, ಡಿ.ಎಸ್.ತಳವಾರ, ಜಿಡ್ನಂದಿ, ಈರಣ್ಣ ಮಾದರ ಮುಂತಾದವರು ಇದ್ದರು. ಕಸಾಪ ಆಜೀವ ಸದಸ್ಯರು ಪಾಲ್ಗೊಂಡಿದ್ದರು.ಕಲಾಶ್ರೀ ಹಾದಿಮನಿ ಪ್ರಾರ್ಥಿಸಿ, ಬಿ.ಆರ್ .ಪಾಟೀಲ ಸ್ವಾಗತಿಸಿ, ಪ್ರೊ.ಬಿ.ಸಿ.ಹನಮಂತಗೌಡ್ರ ನಿರೂಪಿಸಿ, ವಂದಿಸಿದರು.