Advertisement

“ಕಿಸ್” ಸಿನಿಮಾದ ಕಣ್ಣ ನೀರು ಜಾರುತಿದೆ..ಇಂಪಾದ ಹಾಡು ರಿಲೀಸ್

10:10 AM Sep 15, 2019 | Nagendra Trasi |

ಬೆಂಗಳೂರು: ಅಂಬಾರಿ ಸಿನಿಮಾ ನಿರ್ದೇಶಕ ಎಪಿ ಅರ್ಜುನ್ “ಕಿಸ್” ಸಿನಿಮಾ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಇದು ಕೂಡಾ ಲವ್ ಸ್ಟೋರಿ ಸಿನಿಮಾವಾಗಿದೆ. ಸೆಪ್ಟೆಂಬರ್ 12ರಂದು ಕಿಸ್ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

Advertisement

ವಿ.ಹರಿಕೃಷ್ಣ ಮತ್ತು ಎಪಿ ಅರ್ಜುನ್ ಜೋಡಿಯ ಮೆಲೋಡಿ ಕಾಂಬಿನೇಷನ್ ಕಿಸ್ ಸಿನಿಮಾದಲ್ಲೂ ಮುಂದುವರಿಯುವ ಮೂಲಕ ಇಂಪಾದ ಹಾಡುಗಳು ಈಗಾಗಲೇ ಚಿತ್ರಪ್ರೇಮಿಗಳ ಮನ ಗೆದ್ದಿದೆ.

ಸೆಪ್ಟೆಂಬರ್ 12ರಂದು ವಿ.ಹರಿಕೃಷ್ಣ ಕಂಪೋಸ್ ಮಾಡಿರುವ “ಕಣ್ಣ ನೀರಿದು ಜಾರುತಾ ಇದೆ ಹಾಡು ಯೂಟ್ಯೂಬ್ ನಲ್ಲಿ ಜನ ಮೆಚ್ಚುಗೆ ಪಡೆದಿದೆ. ಎರಡು ದಿನಗಳಲ್ಲಿ ಕಿಸ್ ಸಿನಿಮಾದ ಹಾಡು ಯೂಟ್ಯೂಬ್ ನಲ್ಲಿ 1,41,449 ಜನರು ವೀಕ್ಷಿಸಿದ್ದಾರೆ.

ಕಿಸ್ ಸಿನಿಮಾದಲ್ಲಿ ವಿರಾಟ್, ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿದ್ದಾರೆ. ಸಂತೋಷ್ ವೆಂಕಿ ಸಿಂಗರ್, ಎಪಿ ಅರ್ಜುನ್ ಸಾಹಿತ್ಯ, ಸಂಗೀತ ಎಚ್.ಹರಿಕೃಷ್ಣ. ನಿರ್ಮಾಣ ಎಪಿ ಅರ್ಜುನ್.

Advertisement

Udayavani is now on Telegram. Click here to join our channel and stay updated with the latest news.

Next