Advertisement

ವಿಜೃಂಭಣೆಯಿಂದ ನಡೆದ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ 

05:54 PM Mar 18, 2022 | Team Udayavani |

ಪಾವಗಡ: ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

Advertisement

ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಸಾಂಕೇತಿಕವಾಗಿ ರಥೋತ್ಸವ ನಡೆದಿತ್ತು. ಹೀಗಾಗಿ ಈ ವರ್ಷ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.

ವಾದ್ಯ ವೃಂದದೊಂದಿಗೆ ಉತ್ಸವ ಮೂರ್ತಿಗಳ ಪ್ರಾಕಾರೋತ್ಸವ ನಡೆಸಲಾಯಿತು. ನಂತರ ಹೂವಿನಿಂದ ಅಲಂಕರಿಸಲಾಗಿದ್ದ ರಥದಲ್ಲಿ ಉತ್ಸವ ಮೂರ್ತಿಗಳ್ನು  ಪ್ರತಿಷ್ಟಾಪಿಸಲಾಯಿತು. ರಥದಲ್ಲಿ ಅಲಂಕೃತಗೊಂಡಿದ್ದ ಲಕ್ಷ್ಮೀ ನರಸಂಹಸ್ವಾಮಿಗೆ ಮಂಗಳಾರತಿ ನೆರವೇರಿಸಿದ ಬಳಿಕ ಗ್ರೇಡ್ 2 ತಹಶೀಲ್ದಾರ್ ಎನ್. ಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು.

ನಮೋ ಲಕ್ಷ್ಮಿನಾರಸಿಂಹಾಯ ಎಂಬ ಘೋಷಣೆಗಳೊಂದಿಗೆ ಧವನ ಸಿಕ್ಕಿಸಿದ್ದ ಬಾಳೆಹಣ್ಣನ್ನು ಭಕ್ತಾದಿಗಳು ರಥದತ್ತ ಎಸೆದು ನಮಿಸಿದರು. ರಥೋತ್ಸವದ ಪ್ರಯುಕ್ತ ಸ್ವಸ್ತಿವಾಚನ, ಅಭಿಷೇಕ, ದ್ವಜಾರೋಹಣ, ಕಲ್ಯಾಣೋತ್ಸವ, ಅಭಿಷೇಕಾದಿ ಪೂಜೆಗಳು ನಡೆದವು.

Advertisement

ಕೋವಿಡ್ ಮಾರ್ಗಸೂಚಿಯಂತೆ ದೇಗುಲ ಆವರಣದಲ್ಲಿ ಪಾನಕ, ಹೆಸರುಬೇಳೆ, ಪ್ರಸಾದ ವಿತರಣೆಯನ್ನು ನಿಷೇದಿಸಲಾಗಿತ್ತು. ಕೆಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದೇಗುಲದ ಹೊರಭಾಗ ಪಾನಕ, ಹೆಸರುಬೇಳೆ ವಿತರಿಸಿದರು. ತುಮಕೂರು ಮುಖ್ಯ ರಸ್ತೆಯಲ್ಲಿಯೇ ರಥ ಸಾಗಬೇಕಿದ್ದರಿಂದ ಸರ್ಕಲ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ನೇತೃತ್ವದಲ್ಲಿ ಸೂಕ್ತ ಭದ್ರತೆ, ಸುಗಮ ಸಂಚಾರ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next