Advertisement

ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌: ಜಲಸಂರಕ್ಷಣೆ ಯೋಜನೆ

01:32 AM Feb 07, 2020 | Sriram |

ಕಾಸರಗೋಡು: ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌ ವ್ಯಾಪ್ತಿಯಲ್ಲಿ ಜಲಸಂರಕ್ಷಣೆ ಯೋಜನೆ ಅಂಗವಾಗಿ ಜಲಾಶಯಗಳಿಗೆ ನೆರಳು ನೀಡಲು ಬಿದಿರು ಸಸಿಗಳು ಸಿದ್ಧವಾಗುತ್ತಿವೆ.

Advertisement

ಅಜಾನೂರು, ಮಡಿಕೈ, ಉದುಮ, ಪಳ್ಳಿಕ್ಕರೆ, ಪುಲ್ಲೂರು-ಪೆರಿಯ ಸಹಿತ ಗ್ರಾಮ ಪಂಚಾಯತ್‌ಗಳಲ್ಲಿ ಬ್ಯಾಂಬೂ ನರ್ಸರಿಗಳ ಮೂಲಕ ಬಿದಿರು ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು ಪ್ರತಿದಿನ ಇವುಗಳ ಪೋಷಣೆ ಖಚಿತಪಡಿಸು ತ್ತಿದ್ದಾರೆ. 5 ಗ್ರಾಮ ಪಂಚಾಯತ್‌ಗಳಲ್ಲಿ ಹತ್ತು ಮಂದಿ ಈ ಪೋಷಣೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಉದ್ಯೋಗ ಖಾತರಿ ಯೋಜನೆ ಕಾರ್ಮಿ ಕರು ಸ್ವಯಂ ಸಿದ್ಧಪಡಿಸಿರುವ ಕಂಪೋಸ್ಟ್‌ ಪಿಟ್‌ನ್ನು ಬಿದಿರು ಸಸಿ ಬೆಳೆಸುವಿಕೆಗೆ ಬಳಸಲಾಗುತ್ತಿದೆ. 30 ಚದರ ಮೀಟರ್‌ ವಿಸ್ತೀರ್ಣದಲ್ಲಿ ಎಲ್ಲ ಪಂಚಾಯತ್‌ನಲ್ಲೂ ಈ ಸಸಿಗಳು ಬೆಳೆಯುತ್ತಿವೆ.

ವಯನಾಡಿನಿಂದ ತರಿಸಲಾದ 2 ಕಿಲೋ ಬಿದಿರು ಬೀಜಗಳನ್ನು ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಹಂಚಲಾ ಗಿದೆ. ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಬಿತ್ತಲಾದ ಬೀಜಗಳು ಈಗ ಮೊಳಕೆ ಬಂದಿದ್ದು, ಮುಂದಿನ 2 ತಿಂಗಳ ಅವ ಧಿಯಲ್ಲಿ ಬೇರೆಡೆ ನೆಡುವ ಸ್ಥಿತಿಗೆ ಬರಲಿವೆ. ಇವು ಸಿದ್ಧವಾದೊಡನೆ ಬ್ಲಾಕ್‌ ಪಂಚಾಯತ್‌ ವ್ಯಾಪ್ತಿಯ ಕೆರೆಗಳು, ತೋಡುಗಳು ಇತ್ಯಾದಿ ಜಲಾಶಯಗಳ ತಟದಲ್ಲಿ ನೆಡಲಾಗುವುದು. ಜೊತೆಗೆ ಪಂಚಾಯತ್‌ ಗಡಿ ಪ್ರದೇಶಗಳಲ್ಲಿ, ಗ್ರಾಮ ಪಂಚಾಯತ್‌ ಕಚೇರಿಗಳಲ್ಲಿ ಆವರಣ ಗೋಡೆಗಳ ಬದಲು ಬಿದಿರು ಸಸಿಗಳನ್ನು ನೆಡುವ ಯೋಜನೆಗಳಿವೆ. ಬೇಸಗೆ ಬಿರುಸುಗೊಳ್ಳುವ ವೇಳೆ ತಲೆದೋರುವ ಕುಡಿಯುವ ನೀರಿನ ûಾಮಕ್ಕೆ ಇದು ಒಂದು ಹಂತದ ವರೆಗೆ ಪರಿಹಾರ ಒದಗಿಸಲಿದೆ ಎಂಬ ನಿರೀಕ್ಷೆಯಲ್ಲಿ ಬ್ಲಾಕ್‌ ಪಂಚಾಯತ್‌ ಈ ಯೋಜನೆ ಜಾರಿಗೊಳಿಸುತ್ತಿದೆ.

ಹರಿತ ಕೇರಳಂ ಮಿಷನ್‌ನ “ಇನ್ನು ನಾನು ಹರಿಯಲೇ..’ ಎಂಬ ಯೋಜನೆ ಜಾರಿಗೊಳಿಸುವ ಮುನ್ನವೇ ಕಾಂಞಂಗಾಡ್‌ ಬ್ಲಾಕ್‌ ನದಿ ಸಹಿತ ಜಲಾಶಯಗಳ ಸಂರಕ್ಷಣೆಗೆ ಯೋಜನೆ ಸಿದ್ಧಪಡಿಸಿತ್ತು. ಇದರ ಮೊದಲ ಹಂತವಾಗಿ 2018-19ನೇ ಇಸವಿಯಲ್ಲಿ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಹರಿಯುವ ಚಿತ್ತಾರಿ ಹೊಳೆಯ ಪುನಶ್ಚೇತನಕ್ಕಾಗಿ “ಚಿತ್ತಾರಿ ನದಿಯನ್ನು ಅರಿಯೋಣ’ ಎಂಬ ಯೋಜನೆ ಜಾರಿಗೊಳಿಸಿತ್ತು.

ಜನಪರ ಯಜ್ಞ
ಎರಡನೇ ಹಂತವಾಗಿ 2019-20ನೇ ಇಸವಿಯಲ್ಲಿ ನದಿಯ ಎರಡೂ ಬದಿಗಳಲ್ಲಿ ರಾಶಿ ಬಿದ್ದಿರುವ ಪ್ಲಾಸ್ಟಿಕ್‌ ಸಹಿತ ತ್ಯಾಜ್ಯಗಳ ನಿವಾರಣೆಯ ಜನಪರ ಯಜ್ಞ ನಡೆಸಲಾಗಿದೆ. 500 ಮೀಟರ್‌ ವರೆಗಿನ ಕೆಸರು ಹೂಳೆತ್ತುವಿಕೆಯೂ ನಡೆದಿದೆ. ಚಿತ್ತಾರಿ ನದಿ ಬ್ಲಾಕ್‌ ವ್ಯಾಪ್ತಿಯ ಪ್ರಧಾನ ಕುಡಿಯುವ ನೀರಿನ ಮೂಲವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next