Advertisement

ಕಂಗೂರು ಮಠ :ಶ್ರೀ ಗೋಪಿನಾಥ ದೇವರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶ ಸಂಪನ್ನ

02:24 AM May 27, 2019 | sudhir |

ಮಲ್ಪೆ: ಆದಿಉಡುಪಿ ಕಂಗಣಬೆಟ್ಟು ಕಂಗೂರು ಮಠ ಶ್ರೀ ಗೋಪಿನಾಥ ದೇವರ ಶಿಲಾಮಯ ಗರ್ಭಗೃಹ ಸಮರ್ಪಣೆ, ಬಿಂಬ ಪುನಃ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ರವಿವಾರ ಸಂಪನ್ನಗೊಂಡಿತು.

Advertisement

ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ ಮತ್ತು ನಂದಳಿಕೆ ವಿಠಲ ಆಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ ಪುಣ್ಯಾಹ- ಪ್ರತಿಷ್ಠಾ ಹೋಮ ನಡೆಯಿತು. ಬೆಳಗ್ಗೆ 7.46ಕ್ಕೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತು ಬಾಳಗಾರು ಮಠದ ಶ್ರೀ ರಘುಭೂಷಣತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ಗೋಪಿನಾಥ ದೇವರ ಬಿಂಬ ಪ್ರತಿಷ್ಠಾಪಿಸಲಾಯಿತು. ಶ್ರೀ ದೇವರಿಗೆ ಬ್ರಹ್ಮ ಕಲಶಾಭಿಷೇಕವು ನಡೆಯಿತು.

ವಿಶೇಷ ಸನ್ನಿಧಾನವಾಗ‌ಲಿ

ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀ ಕೃಷ್ಣಮಠ ದಲ್ಲಿ ನೂರಾರು ವರ್ಷಗಳ ಹಿಂದಿನಿಂದ ಶ್ರೀಕೃಷ್ಣನ ಜತೆಯಲ್ಲಿ ಅಷ್ಟ ಮಠಾಧೀಶರಿಂದ ಪೂಜಿಸಲ್ಪಡುತ್ತಿದ್ದ ಎಣ್ಣೆಕೃಷ್ಣ ಇಂದು ಕಂಗೂರು ಮಠದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿತನಾಗಿದ್ದಾನೆ. ಇಲ್ಲಿಗೆ ಭಕ್ತಿಯಿಂದ ಬರುವ ಭಕ್ತರ ಎಲ್ಲ ಮನೋಭೀಷ್ಟಗಳನ್ನು ಆ ಭಗವಂತ ಪೂರೈಸಲಿ, ಕೃಷ್ಣನ ವಿಶೇಷ ಅನುಗ್ರಹ ಪಡೆಯುವಂತಾಗಲಿ, ಕಂಗೂರು ಮಠ ವಿಶೇಷವಾದ ಸನ್ನಿಧಾನವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ ಜರಗಿತು. ಸಂಜೆ ವಸಂತ ಪೂಜಾರಾಧನೆ, ದೀಪಾರಾಧನೆ, ಅಷ್ಟಾವಧಾನ ಸೇವೆ ಜರಗಿತು. ಕಂಗೂರು ಮಠ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next