Advertisement

ಕೋಮು ಸಾಮರಸ್ಯ ಕದಡುತ್ತಿರುವ ಆರೋಪ: ಕಂಗನಾ, ರಂಗೋಲಿಗೆ ಮುಂಬೈ ಪೊಲೀಸರಿಂದ ಮೂರನೇ ಸಮನ್ಸ್

07:14 PM Nov 18, 2020 | sudhir |

ಮುಂಬೈ: ಖ್ಯಾತ ಬಾಲಿವುಡ್ ನಟಿ ಕಂಗನಾ ಮತ್ತು ಸಹೋದರಿ ರಂಗೋಲಿ ಚಾಂಡೇಲಾಗೆ ನವೆಂಬರ್ 23 ಮತ್ತು 24 ರಂದು ವಿಚಾರಣೆಗೆ ಹಾಜರಾಗುವಂತೆ ಬಾಂದ್ರಾ ಪೊಲೀಸರು ಮೂರನೇ ಬಾರಿ ಸಮನ್ಸ್ ನೀಡಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸಾಮರಸ್ಯಕ್ಕೆ ಚ್ಯುತಿ ತರುವ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಆರಂಭದಲ್ಲಿ ಬಾಂದ್ರಾ ಪೊಲೀಸರು ಅಕ್ಟೋಬರ್ 26 ಮತ್ತು 27ರಂದು ವಿಜಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಆದರೆ ನಟಿ ಕಂಗನಾ ಹಾಗೂ ಸಹೋದರಿ ಉತ್ತರಿಸಿರಲಿಲ್ಲ.

ನಂತರ ನವೆಂಬರ್ 9 ಮತ್ತು 10 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಹೊರಡಿಸಲಾಗಿತ್ತು. ಆದರೆ ಆ ದಿನಾಂಕದಂದೂ ಕೂಡಾ ಇಬ್ಬರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಪೊಲೀಸರು ಇವರಿಬ್ಬರಿಗೂ ಮೂರನೆ ಬಾರಿ ಸಮನ್ಸ್ ನೀಡಿದ್ದಾರೆ.

ಇದನ್ನೂ ಓದಿ:ವಿಮಾನ‌ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡುವವರೆಗೆ ಪ್ರತಿಭಟನೆ; ಮಾಜಿ ಸಚಿವ ರಮಾನಾಥ ರೈ

Advertisement

ಈ ಕುರಿತಾಗಿ ನಟಿ ಕಂಗನಾ ತಾನು ತನ್ನ ಕುಟುಂಬದ ಸದಸ್ಯರೊಬ್ಬರ ಮದುವೆ ಸಮಾರಂಭದಲ್ಲಿದ್ದು ನವೆಂಬರ್ 15ರ ವರೆಗೂ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂಬುದಾಗಿ ತನ್ನ ವಕೀಲರ ಮುಖೇನ ಪೊಲೀಸರಿಗೆ ತಿಳಿಸಿದ್ದರು ಎಂದು ವರದಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next