Advertisement

ಶೂಟಿಂಗ್‌ ವೇಳೆ ಕಂಗನಾಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು 

12:15 PM Jul 20, 2017 | Team Udayavani |

ಮುಂಬಯಿ: ಪ್ರಖ್ಯಾತ ನಟಿ ಕಂಗನಾ ರಣಾವುತ್‌ ಅವರು ಮಣಿಕರ್ಣಿಕಾ ಚಿತ್ರದ ಶೂಟಿಂಗ್‌ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Advertisement

 ಝಾನ್ಸಿ ರಾಣಿಯ ಕಥಾ ಹಂದರ ಹೊಂದಿರುವ ಚಿತ್ರದ  ಕತ್ತಿ ವರಸೆಯ ದೃಶ್ಯವನ್ನು ಹೈದರಾಬಾದ್‌ನಲ್ಲಿ ಚಿತ್ರೀಕರಿಸುವ ವೇಳೆ ಸಹನಟನ ಖಡ್ಗ ಹಣೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

ಗಾಯಗೊಂಡ ತಕ್ಷಣ ಸ್ಥಳೀಯ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಕತ್ತಿಯ ಪೆಟ್ಟು ಹುಬ್ಬುಗಳ ಮಧ್ಯೆ ಮೂಳೆಯ ವರೆಗೆ ತಗುಲಿದ್ದು,ತೀವ್ರ ರಕ್ತಸ್ರಾವವಾಗಿದೆ ಕೆಲ ದಿನಗಳ ಚಿಕಿತ್ಸೆ ಅಗತ್ಯವಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ವಾರದ ಚಿಕಿತ್ಸೆಯ ಬಳಿಕ ಕಂಗನಾ ಮನೆಗೆ ವಾಪಾಸಾಗಲಿದ್ದಾರೆ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next