ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಅತ್ತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇದು ಅವರಿಗೆ ದೊರಕಿದ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿಯಾಗಿದೆ.
‘ಮಣಿಕರ್ಣಿಕಾ’ ಚಿತ್ರದ ‘ಕ್ವೀನ್ ಆಫ್ ಝಾನ್ಸಿ’ ಮತ್ತು ‘ಪಂಗಾ’ ಚಿತ್ರಗಳಲ್ಲಿನ ಅತ್ತ್ಯುತ್ತಮ ಅಭಿನಯಕ್ಕಾಗಿ ಪ್ರಶಸ್ತಿ ನೀಡಲಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ವಿಶೇಷ ಕಾರ್ಯಕ್ರಮಕ್ಕಾಗಿ ಕಂಗನಾ ಅವರು ಸಾಂಪ್ರದಾಯಿಕ ಶೈಲಿಯ ರೇಷ್ಮೇ ಸೀರೆ ಉಟ್ಟು ಆಗಮಿಸಿ ಕಂಗೊಳಿಸಿದರು.
ವೇದಿಕೆಗೆ ಹೋಗುವ ಮುನ್ನ ತಮ್ಮ ಸುಂದರ ಫೋಟೋಗಳನ್ನು ಇನ್ಟಾಗ್ರಾಮ್‍ನಲ್ಲಿ ಹಂಚಿಕೊಂಡರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ, ತಮ್ಮ ಪೋಷಕರೊಂದಿಗಿನ ಫೋಟೋ ಇನ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ನನಗೆ ಸದಾ ಪೋತ್ಸಾಹ ನೀಡುತ್ತಿರುವ ತಂದೆ ತಾಯಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ
“ನಾವು ನಮ್ಮ ತಂದೆ ತಾಯಿಯರ ಪ್ರೀತಿ, ಆಕಾಂಕ್ಷೆ, ಕಾಳಜಿ, ತ್ಯಾಗಗಳೊಂದಿಗೆ ಬೆಳೆಯುತ್ತೇವೆ. ನನ್ನ ತಂದೆ, ತಾಯಿಗೆ ಸಾಕಷ್ಟು ತೊಂದರೆ ನೀಡಿದ್ದೇನೆ. ಆ ತೊಂದರೆಗಳಿಗೆಲ್ಲಾ ಪರಿಹಾರದ ರೂಪದಲ್ಲಿ ಪ್ರಶಸ್ತಿ ಲಭಿಸಿದೆ. ನನ್ನ ತಾಯಿ, ತಂದೆ ಆಗಿದ್ದಕ್ಕೆ ಧನ್ಯವಾದಗಳು. ನಿಮ್ಮಿಂದ ನಾನು ಹೆಚ್ಚಿನದನ್ನು ಬಯಸುವುದಿಲ್ಲ” ಎಂದು ಇನ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ, “ಅತ್ತ್ಯುತ್ತಮ ಪೋಷಕ ನಟಿ”, ಮತ್ತು “ಕ್ವೀನ್”, “ತನು ವೆಡ್ಸ್ ಮನು ರಿಟನ್ಸ್” ಗಾಗಿ ಅತ್ತ್ಯುತ್ತಮ ನಟಿ ಪ್ರಶಸ್ತಿಗಳನ್ನು ಪಡೆದಿದ್ದರು.