Advertisement

ಜನ ಅವಕಾಶ ಕೊಟ್ಟರೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಇದೆ; ನಟಿ ಕಂಗನಾ

04:54 PM Oct 29, 2022 | Team Udayavani |

ನವದೆಹಲಿ: ಸದಾ ಒಂದಲ್ಲ ಒಂದು ಹೇಳಿಕೆಯಿಂದ ಸುದ್ದಿಯಾಗುವ ಬಾಲಿವುಡ್‌ ನಟಿ ಕಂಗನಾ ರಣಾವತ್ ರಾಜಕೀಯ ಎಂಟ್ರಿಯಾಗುವ ಬಗ್ಗೆ ಸುಳಿವೊಂದನ್ನು ಬಿಟ್ಟು ಕೊಟ್ಟಿದ್ದಾರೆ. ಅಜ್‌ ತಕ್‌ ಟಿವಿ ವಾಹಿನಿಯ ʼಪಂಚಾಯತ್‌ʼ ಎನ್ನುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲಿ ರಾಜಕೀಯ ಸಂಬಂಧಿತ ಪ್ರಶ್ನೆಯೊಂದಕ್ಕೆ ಕಂಗನಾ ಉತ್ತರಿಸಿದ್ದಾರೆ.

Advertisement

ಇತ್ತೀಚೆಗೆ ಕೆಲ ವಿಚಾರಗಳಿಗೆ ಕಂಗನಾ ಅವರು ಮಧ್ಯ ಪ್ರವೇಶಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದು ರಾಜಕೀಯವಾಗಿಯೂ ಸುದ್ದಿಯಾಗಿತ್ತು. ಈಗ 2024ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಾಂಡಿ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಜನರು ರಾಜಕೀಯಕ್ಕೆ ಸೇರಲು ಬಯಸಿದರೆ ತಾನು ಸ್ಪರ್ಧಿಸುವುದಾಗಿ ಕಂಗನಾ ತಿಳಿಸಿದ್ದಾರೆ.

ಖಾಸಗಿ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾದ ಕಂಗನಾ ರಣಾವತ್‌ ಅವರಿಗೆ ನಿರೂಪಕ ತಾವು ರಾಜಕೀಯ ಪ್ರವೇಶಿಸಿ ಸಾರ್ವಜನಿಕ ಸೇವೆಯನ್ನು ಮಾಡಲು ಇಚ್ಛೆ ಪಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಕಂಗನಾ, “ನಾನು ಎಲ್ಲಾ ರೀತಿಯ ಭಾಗವಹಿಸುವಿಕೆಗೆ ಸಿದ್ದವಾಗಿದ್ದೇನೆ. ಹಿಮಾಚಲ ಪ್ರದೇಶದ ಜನರು ನನಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೇವೆ ಮಾಡಲು ಅವಕಾಶ ಕೊಟ್ಟರೆ ಚೆನ್ನಾಗಿರುತ್ತದೆ. ಹಾಗೆ ಆದರೆ ಅದು ನನ್ನ ಸೌಭಾಗ್ಯವೇ ಸರಿಯೆಂದು ಕಂಗನಾ” ಹೇಳಿದ್ದಾರೆ.

ಸದ್ಯ ಕಂಗನಾ ಅವರ ಬಹು ನಿರೀಕ್ಷಿತ ʼಎಮರ್ಜೆನ್ಸಿ” ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಅವರು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next