ಗಂಗಾವತಿ: ಭತ್ತದ ಕಣಜ ಎಂದು ಖ್ಯಾತಿ ಪಡೆದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದರೈತರಿಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳುಎದುರಾಗುತ್ತಿವೆ. ಮಲೆನಾಡಿನ ಭತ್ತಕ್ಕೆ ಬೀಳುವಕಣೆಹುಳು ರೋಗ ಇದೀಗ ಅಚ್ಚುಕಟ್ಟು ಪ್ರದೇಶ ಸೋನಾ ಮಸೂರಿ ಸೇರಿ ಹೊಸತಳಿ ಭತ್ತದ ಬೆಳೆಗೆ ಬಂದಿದ್ದು ರೋಗ ನಿಯಂತ್ರಣಕ್ಕೆ ರೈತರು ಕೃಷಿ ಸಂಶೋಧನೆ ವಿಜ್ಞಾನಿಗಳ ಮೊರೆ ಹೋಗಿದ್ದಾರೆ.
ಭತ್ತದ ಬೆಳೆ ಹುಲುಸಾಗಿ ಬೆಳೆದು ಅಧಿಕ ಇಳುವರಿ ಬರಲು ಭತ್ತದ ಬುಡದಲ್ಲಿ 15-17 ಟಿಸಿಲುಗಳು(ಬಡ್ಡಿ) ಬರುತ್ತಿದ್ದವು. ಕಣೆಹುಳು ರೋಗದಿಂದ ಕೇವಲ 7-8 ಟಿಸಿಲುಗಳು(ಬಡ್ಡಿ)ಬಂದಿದ್ದು, ಇದರಿಂದ ಭತ್ತದ ಇಳುವರಿ ಏಕಾಎಕಿ ಕಡಿಮೆಯಾಗುವ ಸಂಭವವಿದೆ. ಕಣೆಹುಳು ರೋಗ ನಿಯಂತ್ರ ಮಾಡುವುದು ರೈತರಿಗೆ ದೊಡ್ಡ ತಲೆನೋವು ಉಂಟು ಮಾಡಿದೆ. ಅತೀಯಾದ ಮಳೆಯಾಗುವುದು ಮತ್ತು ಅಧಿಕ ಯೂರಿಯಾ ಬಳಕೆಯಿಂದ ಭತ್ತದ ಬುಡದಲ್ಲಿ ಕಂಡುಬರುವ ಕಣೆಹುಳುಗಳು ಭತ್ತದ ಬುಡದ ಟಿಸಿಲುಗಳನ್ನು ತಿನ್ನುವುದರಿಂದ ಟಿಸಿಲುಗಳ ಸಂಖ್ಯೆ ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ. ಇದುವರೆಗೂ ಈ ರೋಗ ಅಧಿಕ ಮಳೆಯಾಗುವ ಪ್ರದೇಶದಲ್ಲಿ ಕಂಡು ಬರುತ್ತಿತ್ತು. ಇದೀಗ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಂಡು ಬಂದಿದ್ದು ರೈತರನ್ನು ತೊಂದರೆಗೀಡು ಮಾಡಿದೆ. ಅಚ್ಚುಕಟ್ಟು ಪ್ರದೇಶದ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿದ್ದು, ಗಂಗಾವತಿ, ಕಾರಟಗಿ, ಕಂಪ್ಲಿ, ಸಿಂಧನೂರು, ಕೊಪ್ಪಳ, ಹೊಸಪೇಟೆ, ಸಿರಗುಪ್ಪಾ ತಾಲೂಕಿನ ಭತ್ತದ ಬೆಳೆಯಲು ಕಣೆಹುಳು ರೋಗ ವ್ಯಾಪಕವಾಗಿದೆ.
ಮಲೆನಾಡಿನಲ್ಲಿ ಕಂಡು ಬರುತ್ತಿದ್ದ ಕಣೆಹುಳು ರೋಗ ಮೊದಲ ಬಾರಿಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಂಡು ಬಂದಿದ್ದು, ರೈತರ ಮನವಿ ಮೇರೆಗೆ ಕಂಪ್ಲಿ, ಢಣಾಪುರ, ಜಂಗಮರ ಕಲ್ಗುಡಿ, ಮುದ್ದಾಪುರ ಭತ್ತದ ಗದ್ದೆಗಳಿಗೆ ಕೃಷಿ ಸಂಶೋಧನೆ ಮತ್ತು ಕೃಷಿವಿಜ್ಞಾನ ಕೇಂದ್ರ ವಿಜ್ಞಾನಿಗಳು ಭೇಟಿ ನೀಡಿ ಕಣೆಹುಳುವಿನ ರೋಗ ಪರಿಶೀಲನೆ ಮಾಡಲಾಗಿದೆ. ಅಧಿಕ ಮಳೆ ಮತ್ತು ರೈತರು ಅಧಿಕ ಯೂರಿಯಾ ಬಳಕೆ ಮಾಡುವುದು ಈ ರೋಗ ಬರಲು ಪ್ರಮುಖ ಕಾರಣವಾಗಿದೆ. ರೋಗ ನಿರೋಧಕ ತಳಿ ಬೆಳೆಯಬೇಕು. ಯೂರಿಯಾ ಗೊಬ್ಬರ ಬಳಕೆ ಕಡಿಮೆ ಮಾಡಬೇಕು. ಮುಂದೆ ರೋಗ ಹರಡದಂತೆ ತಡೆಯಲು ಪ್ರ್ಯಪೋನಿಲ್ 5 ಇಸಿ ಒಂದು ಲೀಟರ್ ನೀರಿಗೆ ಒಂದು ಎಂಎಲ್ ಸಿಂಪರಣೆ ಅಥವಾ ಪೈಯೋಮಿಥಾಕಾjಮ್ .5 ಗ್ರಾಂ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಅಥವಾ ಕ್ಲೋರೋಪೈರಿಪಾಸ್ ಲೀಟರ್ ನೀರಿಗೆ 2 ಎಂಎಲ್ ಹಾಕಿ ಸಂಪರಣೆ ಮಾಡಬೇಕು.-
ಡಾ| ಮಹಾಂತ ಶಿವಯೋಗಿ, ಕೃಷಿ ವಿಜ್ಞಾನಿಗಳು
-ಕೆ.ನಿಂಗಜ್ಜ